News Hour Special: ಎಲ್ಲಾ ಧರ್ಮದವರನ್ನು ಪ್ರೀತಿಸುವ ವ್ಯಕ್ತಿತ್ವ ನಮಗೆ ಮುಖ್ಯ: ಯು.ಟಿ ಖಾದರ್

ಚುನಾವಣೆ ಒಂದು ಪರೀಕ್ಷೆ ತರ, ಚೆನ್ನಾಗಿ ಬರೆದರೆ ಪಾಸ್‌ ಆಗುತ್ತದೆ ಎಂದು ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್‌ ತಿಳಿಸಿದ್ದಾರೆ
 

First Published Feb 17, 2023, 2:39 PM IST | Last Updated Feb 17, 2023, 3:18 PM IST

ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುತ್ತದೆ. ಸರ್ಕಾರ ಬಂದಾಗ ಚೆನ್ನಾಗಿ ಕೆಲಸ ಮಾಡಿದ್ರೆ ಮಾತ್ರ ಮತ್ತೆ ಆರಿಸಿ ಬರುತ್ತೇವೆ ಎಂದು ಯು.ಟಿ ಖಾದರ್ ತಿಳಿಸಿದ್ದಾರೆ. ಉಳ್ಳಾಲದಲ್ಲಿ ಜನಸಾಮಾನ್ಯರು, ಮತದಾರರು ಮತ ಕೊಟ್ಟು ಗೆಲ್ಲಿಸುತ್ತಾರೆ. ಉಳ್ಳಾಲ ಕೋಮು ಗಲಭೆಗೆ ಅವಕಾಶ ಇಲ್ಲ. ಸೋದರತೆಯ ಸಾಮರಸ್ಯ ವಾತಾವರಣವನ್ನು ನಿರ್ಮಾಣ ಮಾಡುವವರು ಗೆಲ್ಲಿಸುತ್ತಾರೆ. ಎಲ್ಲಾ ಧರ್ಮದವರನ್ನು ಪ್ರೀತಿಸುವ ವ್ಯಕ್ತಿತ್ವ ನಮಗೆ ಮುಖ್ಯ ಎಂದರು. ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ಸಿಗಲ್ಲ, ಒಬ್ಬರಿಗೆ ಒಬ್ಬರು ನಿವೇಷನ ಕೊಡಲಿಲ್ಲ. ಈಗಿನ ಸರ್ಕಾರ ಏನು ಕೆಲಸ ಮಾಡಿಲ್ಲ ಎಂದರು. ಕಾಂಗ್ರೆಸ್‌ ಸರ್ಕಾರ ಯಾವಾಗಲೂ ಜನಪರವಾಗಿರುತ್ತೆ, ಅದಕ್ಕೆ ಈ ಬಾರಿ ಕಾಂಗ್ರೆಸ್‌ ಗೆಲ್ಲುತ್ತದೆ ಎಂದರು.

Karnataka Budget 2023: ಬಜೆಟ್ ಮಂಡನೆ ವೇಳೆ ಹೈಡ್ರಾಮಾ: ಕೆಣಕಿದ ಬೊಮ್ಮಾಯಿಗೆ ಕುಟುಕಿದ ಸಿದ್ದು