Karnataka Budget 2023: ಬಜೆಟ್ ಮಂಡನೆ ವೇಳೆ ಹೈಡ್ರಾಮಾ: ಕೆಣಕಿದ ಬೊಮ್ಮಾಯಿಗೆ ಕುಟುಕಿದ ಸಿದ್ದು
ಕಾಂಗ್ರೆಸ್ ಪಕ್ಷದವರು ಕಿವಿ ಮೇಲೆ ಹೂವಿಟ್ಟುಕೊಳ್ಳುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಪಡೆಗೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್'ನವರು ಕಿವಿ ಮೇಲೆ ಹೂವಿಟ್ಟುಕೊಳ್ಳುತ್ತೇನೆ ಎಂದರೆ ಬೇಡ ಎನ್ನುವುದಿಲ್ಲ, ಜನರ ಮೇಲೆ ಕಿವಿ ಮೇಲೆ ಹೂವಿಡುತ್ತಿದ್ದರು. ಈಗ ಜನರೇ ಕಾಂಗ್ರೆಸ್ ಕಿವಿ ಮೇಲೆ ಹೂವಿಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬಜೆಟ್ ಮಂಡನೆ ವೇಳೆ ಅವರು, ಕಾಂಗ್ರೆಸ್'ಗೆ ಟಾಂಗ್ ನೀಡಿದರು. ಸಿಎಂ ಮಾತಿಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇನು ಬಜೆಟ್ ಭಾಷಣವೇ ಎಂದು ಅವರು ಕಿಡಿ ಕಾರಿದರು. 600 ಭರವಸೆಗಳಲ್ಲಿ 50 ಭರವಸೆಗಳನ್ನೂ ಈಡೇರಿಸಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಿಎಂ ಬಜೆಟ್ ಮಂಡನೆ ವೇಳೆ ಹೈಡ್ರಾಮಾ ನಡೆದಿದ್ದು, ಆಡಳಿತ- ವಿಪಕ್ಷಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು.