ಕಾಂಗ್ರೆಸ್‌ ಎಂದರೆ ಅಲ್ಪಸಂಖ್ಯಾತರ ಪಕ್ಷ ಎಂಬ ನಿಲುವು ಇದೆ: ಬಿ.ಕೆ. ಹರಿಪ್ರಸಾದ್

ಕೋಮು ಗಲಭೆಗಳು ಆದಾಗ ಹಿಂದೂ, ಮುಸ್ಲಿಂ ಯಾರೇ ಇರಲಿ ಯುಎಪಿಎ ಕಾಯ್ದೆಯಡಿ ಕೇಸ್ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದರು.
 

First Published Jan 14, 2023, 5:16 PM IST | Last Updated Jan 14, 2023, 5:16 PM IST

ಕಾನೂನು ಎಲ್ಲರಿಗೂ ಒಂದೇ, ಸಂವಿಧಾನ ಎಲ್ಲರಿಗೂ ಒಂದೇ. ಕಾನೂನು ಎಲ್ಲರಿಗೂ ಸಹ ಅನ್ವಯಿಸಬೇಕೇ ವಿನಃ ಒಂದು ಪಕ್ಷಕ್ಕೆ ಅಥವಾ ಒಂದು ವರ್ಗಕ್ಕೆ ಆಗಬಾರದು ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು. ಕಾಂಗ್ರೆಸ್‌ ಪಕ್ಷ ಎಂದರೆ ಅಲ್ಪಸಂಖ್ಯಾತರ ಪಕ್ಷ ಎಂದು ದೇಶದಲ್ಲಿ ಒಂದು ನಿಲುವನ್ನು ಮೂಡಿಸಿದ್ದಾರೆ. ಎಲ್ಲಾ ವರ್ಗದವರು ಹೋರಾಡಿ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಪ್ರತಿಯೊಬ್ಬನಿಗೂ ಹಕ್ಕಿದೆ. ಯಾರಿಗೂ ಜಾಸ್ತಿ ಇಲ್ಲ, ಯಾರಿಗೂ ಕಮ್ಮಿ ಇಲ್ಲ  ಎಂದು ಹೇಳಿದರು.

ಹಿಂದುತ್ವ ಎನ್ನುವುದು ಕೇವಲ ರಾಜಕೀಯದ ಸ್ಲೋಗನ್‌: ಬಿ.ಕೆ. ಹರಿಪ್ರಸಾದ್