ವರದಿಯಲ್ಲಿದ್ದ ಅಂಕಿ ಅಂಶ..ನಿರ್ಧರಿಸುತ್ತಾ ಫಲಿತಾಂಶ..? ವಿಪಕ್ಷಗಳು ಕೇಳಿದ್ದೇನು..? ಸುಪ್ರೀಂ ಹೇಳಿದ್ದೇನು..?
ಚುನಾವಣಾ ಆಯೋಗ ಕೊಟ್ಟ ತಿರುಗೇಟು ಹೇಗಿತ್ತು..?
ಹಳೆ ವರದಿಗೂ..ಹೊಸ ವರದಿಗೂ..ಏನು ವ್ಯತ್ಯಾಸ..?
ಅನುಮಾನಕ್ಕೆ ಕಾರಣವಾಗಿದ್ದು ಅದೊಂದೇ ಸಂಗತಿ..?
ದೇಶದಲ್ಲೀಗ 6 ಹಂತದ ಚುನಾವಣೆ ಮುಗಿದಿದೆ. ಈಗ ಉಳಿದಿರೋದು, 8 ರಾಜ್ಯಗಳ 57 ಕ್ಷೇತ್ರಗಳು ಮಾತ್ರ. ಅಲ್ಲಿನ ಜನರೂ ಸಹ ಜೂನ್ 1ನೇ ತಾರೀಖು ಮತ ಹಾಕಿದರೆ, ಅಲ್ಲಿಗೆ ದೊಡ್ಡದೊಂದು ಹಬ್ಬ ಮುಗಿದ ಹಾಗೆ. ಆ ಕ್ಷಣದಿಂದಲೇ, ಜೂನ್ 4 ಅನ್ನೋ ಕೌತುಕಮಯ ದಿನದ ಬಗ್ಗೆ ಕುತೂಹಲ ನೂರ್ಮಡಿಯಾಗತ್ತೆ. 2024ರ ಚುನಾವಣೆ ಹಲವಾರು ಸಂಗತಿಗಳ ಸುತ್ತಲೂ ಸುತ್ತುತ್ತಾ ಇದೆ. ಒಂದೆಡೆ ಕೇಸರಿ ಪಾಳಯ ಮತ್ತೆ ಅಧಿಕಾರ ಹಿಡಿಬೇಕು, ಮೂರನೇ ಸಲ ಸರ್ಕಾರ ರಚಿಸಬೇಕು ಅಂತ ನೋಡ್ತಾ ಇದೆ. ಇನ್ನೊಂದು ಕಡೆ ಕಾಂಗ್ರೆಸ್(Congress) ಪಾಳಯ, ಶತಾಯ ಗತಾಯ ಮೋದಿ(Narendra Modi) ಅಶ್ವಮೇಧ ತಡೀಲೇಬೇಕು ಅಂತ ಕಂಕಣ ತೊಟ್ಟಿದೆ. ಮಗದೊಂದು ಕಡೆ, ಕಾಂಗ್ರೆಸ್ ಜೊತೆ ಮೈತ್ರಿ ಮಾಡ್ಕೊಂಡಿರೋ ಪಕ್ಷಗಳೆಲ್ಲಾ ಈ ಬಾರಿ ತಮಗೆ ಸಿಹಿಸುದ್ದಿ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿವೆ. ಇದೆಲ್ಲದರ ನಡುವೆ ದೊಡ್ಡದೊಂದು ಚರ್ಚೆ ನಡೀತಿದೆ. ಅದೇನು ಅಂದ್ರೆ, ಕೇಸರಿ(BJP) ಪಾಳಯ 400 ಸ್ಥಾನ ಗೆಲ್ಲುತ್ತಾ ಅಂತ. ಮೋದಿ ಸೇನೆ, ಮೋದಿಯವರೇ ಸೆಟ್ ಮಾಡಿದ ಗುರಿಯ ಬೆನ್ನತ್ತಿದ್ದಾವೆ. ಅದರಿಂದ ಬಿಜೆಪಿಗೆ ಲಾಭವಾಗಲಿದೆ ಅಂತ ರಾಜಕೀಯ ಪಂಡಿತರೂ ಹೇಳ್ತಾರೆ.
ಇದನ್ನೂ ವೀಕ್ಷಿಸಿ: ಬಾರ್‌ನಲ್ಲಿ ಭಯಾನಕ ಘಟನೆ: ಡಿಜೆ ಎದೆಗೆ ಗನ್ ಇಟ್ಟು ಹತ್ಯೆ.. ಕುಡುಕ ಕೊಲೆಗಾರನಿಗಾಗಿ ತಲಾಶ್ !