Asianet Suvarna News Asianet Suvarna News

ಬಾರ್‌ನಲ್ಲಿ ಭಯಾನಕ ಘಟನೆ: ಡಿಜೆ ಎದೆಗೆ ಗನ್ ಇಟ್ಟು ಹತ್ಯೆ.. ಕುಡುಕ ಕೊಲೆಗಾರನಿಗಾಗಿ ತಲಾಶ್‌ !

ಹುಡುಗಿಯರ ವಿಚಾರಕ್ಕೆ ಜಗಳ ಆಗಿದ್ದು, ಬಾರ್‌ನಲ್ಲಿದ್ದ ಡಿಜೆಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಘಟನೆ  ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ. 
 

ಜಾರ್ಖಂಡಿನ ರಾಂಚಿಯಲ್ಲಿ (Ranchi) ಕುಡುಕರ ಅಟ್ಟಹಾಸ ಮಿತಿಮೀರಿದೆ. ಬಾರ್‌ನಲ್ಲಿ(Bar) ಕುಡಿದು ದುಷ್ಕರ್ಮಿ ಡಿಜೆಗೆ ಗುಂಡುಹಾರಿಸಿದ್ದಾನೆ. ಡಿಜೆ ಸಂದೀಪ್ ಎದೆಗೆ ಗನ್(Gun) ಪಾಯಿಂಟ್ ಇಟ್ಟು ಕೊಲೆ(Murder)  ಮಾಡಲಾಗಿದ್ದು, ರಾಂಚಿಯ ಎಕ್ಸ್ಟ್ರೀಮ್ ಬಾರ್‌ನೊಳಗೆ (extreme bar) ಈ ದುರಂತ ಸಂಭವಿಸಿದೆ. ಆಡಿಸನ್ ಬ್ಲೂ ಹೋಟೆಲ್ ಎದುರು ಈ ಬಾರ್ ಇದ್ದು, ಹುಡುಗಿಯರಿಗೆ ಚುಡಾಯಿಸಿದ ವಿಷಯಕ್ಕೆ ಗಲಾಟೆ ಆರಂಭ ಆಗಿದೆ. ಇನ್ನು ದುಷ್ಕರ್ಮಿಗಳ ಹುಡುಕಾಟದಲ್ಲಿರುವ ಪೊಲೀಸರು ತಲ್ಲೀನರಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಕರ್ನಾಟಕಕ್ಕೆ ಮಹಾರಾಷ್ಟ್ರದೊಂದಿಗೂ ಶುರುವಾಗುತ್ತಾ ನೀರಿನ ಸಮರ? ಇದೇನಿದು ಹೊಸ ಕುತಂತ್ರ?

Video Top Stories