Asianet Suvarna News Asianet Suvarna News

ಬೇರೆ ಪಕ್ಷದಿಂದ ಬರಲಿಲ್ಲ ಅಂದ್ರೆ ಬಿಜೆಪಿ ಸರ್ಕಾರ ಬರ್ತಿರಲಿಲ್ಲ: ಈಶ್ವರಪ್ಪ

Aug 11, 2021, 2:18 PM IST

ಬೆಳಗಾವಿ(ಆ.11): ಬೇರೆ ಪಕ್ಷದಿಂದ ಬರಲಿಲ್ಲ ಅಂದ್ರೆ ನಮ್ಮ ಸರ್ಕಾರ ಬರ್ತಿರಲಿಲ್ಲ, ಸಂಪುಟ ರಚನೆ ವೇಳೆ ಅಸಮಾಧಾನ ಇರೋದು ಸಹಜ, ಅಸಮಾಧಾನಿತರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚಿಸುತ್ತಾರೆ ಅಂತ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. ಇಂದು(ಬುಧವಾರ) ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಪೂರ್ಣ ಬಹುಮತ ಬಂದಿರಲಿಲ್ಲ. ಅದರೆ, ಆಡಳಿತ ನಡೆಸಿ ಅಂತ ಆದೇಶ ಕೊಟ್ಟಿದ್ದರು. ಹೀಗಾಗಿ ಬೇರೆ ಬೇರೆ ಪಕ್ಷದಿಂದ ಬಂದಂತವರಿಗೆ ಅಧಿಕಾರ ಕೊಡುವುದು ಸ್ವಾಭಾವಿಕ ಎಂದು ಹೇಳುವ ಮೂಲಕ ಆನಂದ ಸಿಂಗ್‌ ಪರ ಬ್ಯಾಟ್‌ ಬೀಸಿದ್ದಾರೆ. 

ದೇವೇಗೌಡ್ರ ಭೇಟಿಗೆ ವಿರೋಧ: ಪ್ರೀತಂಗೌಡ್ರನ್ನ ಕರೆದು ಕ್ಲಾಸ್ ತೆಗೆದುಕೊಂಡ ಸಿಎಂ