ಅಶೋಕ್ ಏನು ದೊಡ್ಡ ಇಂಟರ್ ನ್ಯಾಷನಲ್ ಲೀಡರ್ ಬಿಡಿ, ಅವರ ಮಾತನ್ನ ಕೇಳಲೇಬೇಕು: ಚಲುವರಾಯಸ್ವಾಮಿ
ಜನರು ಬಿಜೆಪಿ ತಿಸ್ಕರಿಸಿದ್ದಾರೆ, ಅವರಿಗೆ ವಿಚಾರಗಳು ಏನು ಇಲ್ಲ.ಆದ್ರಿಂದ ಏನಾದ್ರು ತೀಟೆ ಮಾಡಬೇಕಲ್ಲ ಅಂತ ಮಾಡುತ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯ: ಮತಾಂತರ ಹಾಗೂ ಗೋಹತ್ಯೆ ಕಾಯ್ದೆ ವಾಪಸ್ ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಶಾಸಕ, ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಬೇಕಾದ ವಿಷಯವಾಗಿದೆ.ನಾವು ಮಾಡ್ತಿವೋ ಬಿಡ್ತಿವೋ ಬಿಜೆಪಿಯವರೇ ಮೊದಲು ಸ್ಟಾಟ್ ಮಾಡ್ತಾರೆ. ಜನರು ಬಿಜೆಪಿ ತಿಸ್ಕರಿಸಿದ್ದಾರೆ, ಅವರಿಗೆ ವಿಚಾರಗಳು ಏನು ಇಲ್ಲ.ಆದ್ರಿಂದ ಏನಾದ್ರು ತೀಟೆ ಮಾಡಬೇಕಲ್ಲ ಅಂತ ಮಾಡುತ್ತಿದ್ದಾರೆ. ಕಾಂಗ್ರೆಸ್ ಕರ್ನಾಟಕವನ್ನ ಪಾಕಿಸ್ತಾನ ಮಾಡಲು ಹೊರಟಿದೆ ಎಂಬ ಆರ್.ಅಶೋಕ್ ಹೇಳಿಕೆ ವಿಚಾರ ಮಾತನಾಡಿ, ಅಶೋಕ್ ಏನು ದೊಡ್ಡ ಇಂಟರ್ ನ್ಯಾಷನಲ್ ಲೀಡರ್ ಬಿಡಿ. ಅವರ ಮಾತನ್ನ ಕೇಳಲೇ ಬೇಕು.ಇಲ್ಲಿತನಕ ಏನ್ ರಾಮರಾಜ್ಯ ಮಾಡಿದ್ರಾ.!?.ನಿಜವಾಗಿ ರಾಮರಾಜ್ಯ ಮಾಡಿದ್ರೆ ಅದು ಕಾಂಗ್ರೆಸ್.ಅಶೋಕ್ ನಾಲಿಗೆ ಹಿಡಿತ ಇಲ್ಲದೆ ಮಾತನಾಡ್ತಾರೆ ಎಂದು ಹೇಳುವ ಮೂಲಕ ಅಶೋಕ್ ವಿರುದ್ದ ವ್ಯಂಗ್ಯವಾಡುತ್ತಲೇ ಸಚಿವ ಚಲುವರಾಯಸ್ವಾಮಿ ಕುಟುಕಿದರು.
ಇದನ್ನೂ ವೀಕ್ಷಿಸಿ: ವೀಕೆಂಡ್‌ನಲ್ಲಿ ಮಹಿಳೆಯರಿಂದ ಟೆಂಪಲ್ ರನ್: ಸಿಗಂದೂರಿಗೆ ರಾಜ್ಯದ ವಿವಿಧ ಭಾಗಗಳಿಂದ ಬರುತ್ತಿರುವ ಸ್ತ್ರೀಯರು