ಮರಾಠ ಮತಗಳ ಮೇಲೆ ಪಕ್ಷಗಳ ಕಣ್ಣು: ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ 'ಮಹಾ' ನಾಯಕರು

ಮರಾಠಿ ಭಾಷಿಕ ಮತಗಳ ಮೇಲೆ ರಾಷ್ಟ್ರೀಯ ಪಕ್ಷಗಳ ಕಣ್ಣು
ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಮರಾಠಿ ನಾಯಕರಿಗೆ ಮಣೆ
ಮರಾಠ ಮತಕ್ಕಾಗಿ ಬಿಜೆಪಿ-ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ

First Published Apr 20, 2023, 12:31 PM IST | Last Updated Apr 20, 2023, 12:31 PM IST

ಬೆಳಗಾವಿ: ಮರಾಠಿ ಭಾಷಿಕ ಮತಗಳ ಮೇಲೆ ರಾಷ್ಟ್ರೀಯ ನಾಯಕರು ಕಣ್ಣಿಟ್ಟಿದ್ದು, ಈ ಹಿನ್ನೆಲೆ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಮರಾಠ ನಾಯಕರಿಗೆ ಮಣೆ ಹಾಕಲಾಗಿದೆ. ಮರಾಠ ಮತಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಹಾಗಾಗಿ ಮಹಾರಾಷ್ಟ್ರದ ನಾಯಕರಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಿವೆ. ಬಿಜೆಪಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ಗೆ ಪ್ರಚಾರಕ ಪಟ್ಟಿಯಲ್ಲಿ ಸ್ಥಾನ ನೀಡಿದೆ. ಇನ್ನೂ ಇತ್ತಾ ಕಾಂಗ್ರೆಸ್‌  ಮಾಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚೌಹಾಣ್‌ ಮತ್ತು ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್‌ ಚೌಹಾಣ್‌ಗೆ ಪಟ್ಟಿಯಲ್ಲಿ ಸ್ಥಾನವನ್ನು ನೀಡಿದೆ. ಈ ಮೂಲಕ ಎರಡೂ ಪಕ್ಷಗಳು ಮರಾಠ ಮತಗಳ ಮನಗೆಲ್ಲುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಲು ಮುಂದಾಗಿವೆ.

ಇದನ್ನೂ ವೀಕ್ಷಿಸಿ: ಪ್ರಚಾರ ಕಣಕ್ಕೆ ಮೋದಿ ಎಂಟ್ರಿ : ಚನ್ನಪಟ್ಟಣದಲ್ಲಿ ಮೊದಲ ರೋಡ್ ಶೋ

Video Top Stories