Asianet Suvarna News Asianet Suvarna News

Karnataka Politics: ಬಳ್ಳಾರಿ 'ಕುಚಿಕು ಗೆಳೆಯರ' ನಡುವೆ ಶೀತಲ ಸಮರ?

ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಸ್ನೇಹದಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ಮೂಡಿದೆ.
 

ಬೆಂಗಳೂರಿನಲ್ಲಿ ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭ ಅದ್ದೂರಿಯಾಗಿ ನಡೆದಿದೆ. ಶ್ರೀರಾಮುಲು ಬಳ್ಳಾರಿಯಲ್ಲೇ ಇದ್ದರೂ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಜನಾರ್ದನರೆಡ್ಡಿ ಹಾಗೂ ರಾಮುಲು  ಭಿನ್ನಮತಕ್ಕೆ ಹೊಸ ಪಕ್ಷ ಕಾರಣನಾ ಎಂಬ ಪ್ರಶ್ನೆ ಮೂಡಿದೆ. ರೆಡ್ಡಿಯ ಹೊಸ ಪಕ್ಷಕ್ಕೆ ಹೋಗಲು ರಾಮುಲು ಒಪ್ಪುತ್ತಿಲ್ಲವಂತೆ. ಬಿಜೆಪಿಯಲ್ಲಿ ಮನ್ನಣೆ ಸಿಗದಿದ್ದಕ್ಕೆ ಹೊಸ ಪಕ್ಷ ಕಟ್ಟಲು ನಿರ್ಧಾರ ಮಾಡಲಾಗಿದ್ದು, ಸಧ್ಯ ಬಿಜೆಪಿಯಲ್ಲಿ ಉತ್ತುಂಗ ಸ್ಥಾನದಲ್ಲಿರುವ  ರಾಮುಲು ಹೊಸ ಪಕ್ಷದ ಸಹವಾಸ ಬೇಡ ಎನ್ನುತ್ತಿದ್ದಾರೆ.