ಹಿಂದುಳಿದ ವರ್ಗಗಳ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕಾಂಗ್ರೆಸ್...

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮತ ಬೇಟೆಗೆ ಕಾಂಗ್ರೆಸ್‌ ಪ್ಲಾನ್ ಮಾಡಿದ್ದು, ಚಿಕ್ಕ ಪುಟ್ಟ ಸಮುದಾಯಗಳನ್ನು ಸೆಳೆಯಲು ಕೈ ಪಡೆ ತಯಾರಿ ನಡೆಸಿದೆ.

First Published Dec 2, 2022, 3:40 PM IST | Last Updated Dec 2, 2022, 3:40 PM IST

ಶಿವಮೊಗ್ಗದಲ್ಲಿ ಬೃಹತ್‌ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ತಯಾರಿ ನಡೆದಿದೆ. ಜನವರಿ, ಫೆಬ್ರವರಿ ಕೊನೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ. ಮಧು ಬಂಗಾರಪ್ಪ ನೇತೃತ್ವದಲ್ಲಿ ಸಮಾವೇಶಕ್ಕೆ ತಯಾರಿ ನಡೆದಿದ್ದು, ಎಸ್. ಬಂಗಾರಪ್ಪ, ಸಿದ್ದರಾಮಯ್ಯ, ದೇವರಾಜ್‌ ಅರಸು, ಮೊಯ್ಲಿ ಜನಾರ್ದನ ಪೂಜಾರಿ ಕೊಡುಗೆ ಬಗ್ಗೆ ಹಿಂದುಳಿದ ವರ್ಗಕ್ಕೆ ವಿವರಣೆ ನೀಡಲಾಗುತ್ತದೆ. ಸಮಾವೇಶ ಹಿನ್ನೆಲೆ ಮಧು ಬಂಗಾರಪ್ಪ ಪ್ರವಾಸ ಆರಂಭಿಸಿದ್ದು, ಹಿಂದುಳಿದ ಸಮುದಾಯಗಳ ಭೇಟಿ ಹಾಗೂ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಶಿವಮೊಗ್ಗದಿಂದ ರಾಜಕೀಯ ಸಂದೇಶ ರವಾನೆಗೆ ಕೈ ನಾಯಕರ ಪ್ಲಾನ್‌ ಇದಾಗಿದ್ದು, ರಾಹುಲ್‌ ಗಾಂಧಿ ಸೇರಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.