ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ, ಡಿ.ಕೆ.ಸುರೇಶ್‍ಗೆ ಎಚ್‍ಡಿಕೆ ವಾರ್ನಿಂಗ್

ಇವನಿಂದ ನಾನೇನು ಕಲಿಯಬೇಕಾಗಿಲ್ಲ. ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ. ಇವರ ಬ್ಯಾಕ್ ಗ್ರೌಂಡ್ ನನಗೆ ಗೊತ್ತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

First Published Mar 13, 2022, 5:13 PM IST | Last Updated Mar 13, 2022, 5:13 PM IST

ರಾಮನಗರ, (ಮಾ.13):: ಇವನಿಂದ ನಾನೇನು ಕಲಿಯಬೇಕಾಗಿಲ್ಲ. ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ. ಇವರ ಬ್ಯಾಕ್ ಗ್ರೌಂಡ್ ನನಗೆ ಗೊತ್ತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

HD Kumaraswamy ಇನ್ಮುಂದೆ ತಾಜ್‌ ವೆಸ್ಟೆಂಡ್‌ಗೆ ಹೋಗಲ್ಲ!

ಕನಕಪುರದಲ್ಲಿ ಎಷ್ಟು ರೈತ ಕುಟುಂಬಗಳನ್ನು ಹಾಳು ಮಾಡಿದ್ದಾರೋ, ಹಣ ದಾಹಕ್ಕೆ ಜಮೀನು ಒಡೆದು ಬಂಡೆಗಳನ್ನು ಲೂಟಿ ಮಾಡಿದ್ದಾರೋ, ಬಂಡೆಗಳನ್ನು ವಿದೇಶಕ್ಕೆ ಸಾಗಿಸಿದಂತವರು ಇವರು, ಇವರಿಂದ ನಾನು ಬುದ್ಧಿ ಕಲಿಯಬೇಕೇ? ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ ಎಂದು ಡಿ.ಕೆ.ಸುರೇಶ್‍ಗೆ ಕುಮಾರಸ್ವಾಮಿ ವಾರ್ನಿಂಗ್ ಕೊಟ್ಟಿದ್ದಾರೆ.