'ಸಿಪಿ ಯೋಗೇಶ್ವರ್ ಅಲ್ಲ ಸಿಡಿ ಯೋಗೇಶ್ವರ್'
ಬಿಜೆಪಿ ಅಧಿಕಾರಕ್ಕೆ ಬರಲು ಯೋಗೇಶ್ವರ್ ಕಾರಣರಲ್ಲ| ಬಾಂಬೆಯಲ್ಲಿ ನನ್ನ ಹಿಂದೆ ಚೀಲ ಹಿಡಿದು ಓಡಾಡುತ್ತಿದ್ದ, ಇಂಥಹವನಿಂದ ಪಕ್ಷ ಅಧಿಕಾರಕ್ಕೆ ಬರಲು ಹೇಗೆ ಕಾರಣ ಎಂದು ಯೋಗೇಶ್ವರ್ ವಿರುದ್ಧ ಹರಿಹಾಯ್ದ ವಿಶ್ವನಾಥ್|
ಬೆಂಗಳೂರು(ಜ.15): ಸಂಪುಟಕ್ಕೆ ಸಿ.ಪಿ.ಯೋಗೇಶ್ವರ್ ಸೇರ್ಪಡೆಯಾಗುತ್ತಿದ್ದಂತೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ರೇಣುಕಾಚಾರ್ಯ ಅಷ್ಟೇ ಅಲ್ಲ ಎಂಎಲ್‌ಸಿ ವಿಶ್ವನಾಥ್ ಕೂಡ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಸಿ.ಪಿ. ಯೋಗೇಶ್ವರ್ ಅಲ್ಲ ಅವನು ಸಿಡಿ ಯೋಗೇಶ್ವರ್, ಭ್ರಷ್ಟನಿಗೆ ಪಟ್ಟ ಕಟ್ಟಿದ್ದಕ್ಕೆ ಈಗಲೂ ನನಗೆ ಆಕ್ಷೇಪವಿದೆ ಎಂದು ಹೇಳಿದ್ದಾರೆ.
ಸಿಗದ ಸಚಿವ ಸ್ಥಾನ: ಮುಂದಿನ ವಾರ ರೆಬೆಲ್ ಶಾಸಕರ ಸಭೆ
ಬಿಜೆಪಿ ಅಧಿಕಾರಕ್ಕೆ ಬರಲು ಯೋಗೇಶ್ವರ್ ಕಾರಣರಲ್ಲ, ಬಾಂಬೆಯಲ್ಲಿ ನನ್ನ ಹಿಂದೆ ಚೀಲ ಹಿಡಿದು ಓಡಾಡುತ್ತಿದ್ದ, ಇಂಥಹವನಿಂದ ಪಕ್ಷ ಅಧಿಕಾರಕ್ಕೆ ಬರಲು ಹೇಗೆ ಕಾರಣ ಎಂದು ಯೋಗೇಶ್ವರ್ ವಿರುದ್ಧ ವಿಶ್ವನಾಥ್ ಹರಿಹಾಯ್ದಿದ್ದಾರೆ.