ಕನಕಪುರದಲ್ಲಿ ಡಿಕೆಸು ನಾಮಪತ್ರ ಸಲ್ಲಿಕೆ: ಬಿಜೆಪಿ ರಣತಂತ್ರಕ್ಕೆ ಹೆದರಿದ್ರಾ 'ಡಿಕೆ ಬ್ರದರ್ಸ್' ?

ಕನಕಪುರದಲ್ಲಿ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಕೆ
ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಗೆ ಸಲ್ಲಿಕೆ
ಕುತೂಹಲ ಮೂಡಿಸಿದ ಡಿಕೆ ಬ್ರದರ್ಸ್‌ ನಡೆ

First Published Apr 21, 2023, 1:00 PM IST | Last Updated Apr 21, 2023, 1:00 PM IST

ರಾಮನಗರ: ವಿಧಾನಸಭಾ ಚುನಾವಣೆ ಹಿನ್ನೆಲೆ ಕನಕಪುರ ಕ್ಷೇತ್ರದಿಂದ ಡಿಕೆ ಸುರೇಶ್‌ ನಾಮಪತ್ರ ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕಣದಲ್ಲಿ ಇರುವಾಗಲೇ ನಾಮಪತ್ರ ಸಲ್ಲಿಸಿರುವುದು ಬಾರೀ ಕುತೂಹಲಕ್ಕೆ ಕಾರಣವಾಗಿದೆ. ಡಿಕೆಶಿಯ ನಾಮಪತ್ರ ತಿರಸ್ಕೃತವಾಗುವ ಭಯದಿಂದ ಇವರು ಸಲ್ಲಿಸಿದ್ರಾ ಎಂಬ ಅನುಮಾನ ಈಗ ಶುರುವಾಗಿದೆ. ಒಟ್ಟಿನಲ್ಲಿ ಕನಕಪುರದಲ್ಲಿ ಡಿಕೆ ಸುರೇಶ್‌ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಡಿಕೆಶಿ ವಿರುದ್ಧ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ನಾಮಪತ್ರ ರಿಜೆಕ್ಟ್‌ ಆಗುವ ಸಾಧ್ಯತೆ ಇರುವ ಭಯದಿಂದ ಡಿಕೆ ಸುರೇಶ್‌ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಬಿಜೆಪಿಯ ರಣತಂತ್ರಕ್ಕೆ ಡಿಕೆ ಬ್ರದರ್ಸ್ ಹೆದರಿದಂತೆ ಕಾಣುತ್ತದೆ.

ಇದನ್ನೂ ವೀಕ್ಷಿಸಿ: ಸಾಹುಕಾರ್‌ ಕೋಟೆಗೆ ಸವದಿ ಲಗ್ಗೆ: ಜಾರಕಿಹೊಳಿ ತಂತ್ರಕ್ಕೆ ಪ್ರತಿತಂತ್ರ!

Video Top Stories