ತಮ್ಮನಿಗಾಗಿ ರಾಜಕೀಯ ದಾಳವನ್ನೇ ಬದಲಿಸಿದ್ರಾ ಡಿಕೆಶಿ ? ಕನಕಪುರ ಬೆಂಗಳೂರು ಸೇರಿದ್ರೆ ಏನಾಗುತ್ತೆ ಗೊತ್ತಾ..?
ಡಿಕೆಶಿಯ ಪಂಥಾಹ್ವಾನ ಸ್ವೀಕರಿಸಿದ ಹೆಚ್ಡಿಕೆ..!
ಆಣೆ ಪ್ರಮಾಣದ ಟಾಸ್ಕಿಗೂ ಕುಮಾರಣ್ಣ ಸೈ..!
ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಸಿಡಿ ಮಿಡಿ..!
ಕನಕಪುರವನ್ನ ರಾಮನಗರ ಜಿಲ್ಲೆಯಿಂದ ಬೇರ್ಪಡಿಸಿ ಬೆಂಗಳೂರಿಗೆ(Bengaluru) ಸೇರಿಸುವ ಡಿಕೆಶಿ ಮಾತಿಗೆ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಸುದ್ದಿಗೋಷ್ಟಿ ಕರೆದು ತಮ್ಮ ಆಕ್ರೋಶವನ್ನೆಲ್ಲಾ ಹೊರ ಹಾಕಿದ್ದಾರೆ. ಇತ್ತ ತಮ್ಮ ಕ್ಷೇತ್ರವನ್ನ ರಾಜಧಾನಿಗೆ ಸೇರಿಸುವ ಮಾತನ್ನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್(DK shivakumar) ಈಗ ತಮ್ಮಹೇಳಿಯನ್ನ ಬದಲಿಸೋ ಯತ್ನವನ್ನ ಮಾಡ್ತಾ ಇದ್ದಾರೆ. ಇದರ ಹಿಂದೆ ಅನೇಕ ರಾಜಕೀಯ ಲೆಕ್ಕಾಚಾರಗಳು ಕೂಡಿವೆ. ಡಿಕೆಶಿ ಅಷ್ಟೊಂದು ಸುಲಭವಾಗಿ ಕನಕಪುರವನ್ನ ಬೆಂಗಳೂರಿಗೆ ಸೇರಿಸೋಕೆ ಆಗಲ್ಲ. ಇದು ತಿಳಿದೇ ಡಿಸಿಎಂ ಯೂಟರ್ನ್ ಹೊಡೆದ್ರಾ..? ಅದಕ್ಕೂ ಮೊದಲು ಅಲ್ಲಿ ತಮ್ಮ ಸಹೋದರನ ರಾಜಕೀಯ ವಿಚಾರವೂ ಬರುತ್ತೆ. ಕನಕಪುರವನ್ನ(Kanakapura) ರಾಮನಗರದಿಂದ ಬೆಂಗಳೂರಿಗೆ ಶಿಫ್ಟ್ ಮಾಡೋ ಮಾತನ್ನಾಡಿದ್ದ ಡಿಕೆ ಶಿವಕುಮಾರ್ ನಿನ್ನೆಯೇ ಯೂಟರ್ನ್ ಹೊಡೆದಿದ್ದರು. ರಾತ್ರಿ ಎಕ್ಸ್ನಲ್ಲಿ ಪೋಸ್ಟ್ ಹಾಕೋ ಮೂಲಕ ರಾಮನಗರ ಜಿಲ್ಲೆಯ ಮರುನಾಮಕರಣದ ಮಾತನ್ನಾಡಿದ್ದರು. ಇದರ ಹಿಂದೆ ಡಿಕೆ ಸುರೇಶ್ ಅವರ ರಾಜಕೀಯ ಅಸ್ಥಿತ್ವ ಅಡಗಿದೆಯಾ ಅನ್ನೋ ಅನುಮಾನ ಮೂಡಿದ್ದು ಸುಳ್ಳಲ್ಲ. ಕನಕಪುರ ಕದನದ ವಿಚಾರಕ್ಕೆ ಇನ್ನೊಂದು ಹೊಸ ರಾಜಕೀಯ ಚರ್ಚೆ ಶುರುವಾಗಿದೆ. ಡಿಕೆಶಿ ರಾಮನಗರಕ್ಕೆ ಹೊಸ ಹೆಸರು ಇಡೋ ಸೂಚನೆ ನೀಡಿದ ಬೆನ್ನಲ್ಲೇ ಮೂರು ದಿನ ರಾಜಕೀಯ ಹಂಗಾಮವಾದ ಸುದ್ದಿ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.
ಇದನ್ನೂ ವೀಕ್ಷಿಸಿ: ಮಾರುತಿ ಬರೆದ ಡೆತ್‌ನೋಟ್‌ನಲ್ಲಿ ಏನಿತ್ತು ? ಪೊಲೀಸರೂ ಅವನ ವಿರುದ್ಧ ನಿಂತುಬಿಟ್ಟಿದ್ರಾ..?