ಹೈಕಮಾಂಡ್‌ ಜತೆ ದೂರವಾಣಿ ಮಾತು: ಕಾಂಗ್ರೆಸ್‌ನಲ್ಲಿ ಹಲ್ ಚಲ್ ಎಬ್ಬಿಸಿದ ಡಿಕೆಶಿ ನಡೆ

ಕೆಪಿಸಿಸಿ ಹುದ್ದೆ ಮೇಲೆ ಹಲವು ನಾಯಕರ ಕಣ್ಣು ಬಿದ್ದಿದ್ದು, ಸೈಲೆಂಟ್‌ ಆಗಿ ಹೈಕಮಾಂಡ್‌ ಮುಂದೆ ಲಾಭಿ ನಡೆಸುತ್ತಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್‌ ಅವರು ಅಹ್ಮದ್ ಪಾಟೀಲ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಭಾರೀ ಸಂಚಲನ ಮೂಡಿಸಿದೆ.

First Published Dec 11, 2019, 5:31 PM IST | Last Updated Dec 11, 2019, 5:31 PM IST

ಬೆಂಗಳೂರು, (ಡಿ.11): ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2ರಲ್ಲಿ ಗೆದ್ದು ಹೀನಾಯ ಸೋಲುಕಂಡಿದೆ. ಇದರ ಹೊಣೆ ಹೊತ್ತು ವಿಪಕ್ಷ ಹಾಗೂ ಶಾಸಕಾಂಗ ಪಕ್ಷ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಅಷ್ಟಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಟ್ರಬಲ್ ಶೂಟರ್?  ವಿಪಕ್ಷ ಸ್ಥಾನಕ್ಕೆ ಅಚ್ಚರಿ ಆಯ್ಕೆ!

ಇದೀಗ ಕೆಪಿಸಿಸಿ ಹುದ್ದೆ ಮೇಲೆ ಹಲವು ನಾಯಕರ ಕಣ್ಣು ಬಿದ್ದಿದ್ದು, ಸೈಲೆಂಟ್‌ ಆಗಿ ಹೈಕಮಾಂಡ್‌ ಮುಂದೆ ಲಾಭಿ ನಡೆಸುತ್ತಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್‌ ಅವರು ಅಹ್ಮದ್ ಪಾಟೀಲ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಭಾರೀ ಸಂಚಲನ ಮೂಡಿಸಿದೆ.

ಅಷ್ಟೇ ಅಲ್ಲದೇ ದೂರವಾಣಿ ಮಾತುಕತೆ ಬಳಿಕ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿದ್ದು, ಡಿಕೆಶಿ ನಡೆ ರಾಜ್ಯ ಕಾಂಗ್ರೆಸ್‌ನಲ್ಲಿ ಹಲ್ ಚಲ್ ಎಬ್ಬಿಸಿದೆ. ಹಾಗಾದ್ರೆ, ಏನೆಲ್ಲಾ ಆಗಿದೆ ಎನ್ನುವ ಇನ್ನಷ್ಟು  ಸಂಪೂರ್ಣ ಮಾಹಿತಿ ವಿಡಿಯೋನಲ್ಲಿದೆ ನೋಡಿ