ಮೇಲ್ಮನೆ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ.. ಒಟ್ಟು ಮೂರು ಹೆಸರು..ಯಾರಿಗೆ ಅವಕಾಶ ?

ಆಂತರಿಕವಾಗಿ ಸಿಟಿ ರವಿ ಪರ ಕೆಲವು ಪರಿಷತ್ ಸದಸ್ಯರ ಬೆಂಬಲ
ಸೀನಿಯಾರಿಟಿ, ಅನುಭವದ ಆಧಾರದ ಮೇಲೆ ಸಿಟಿ ರವಿ ಹೆಸರು
ನಾರಾಯಣಸ್ವಾಮಿ ವಿಪಕ್ಷ ನಾಯಕನಾಗಲಿ ಎಂದ ಬಿಎಸ್‌ವೈ

First Published Jul 9, 2024, 11:33 AM IST | Last Updated Jul 9, 2024, 11:34 AM IST

ಮೇಲ್ಮನೆ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ(BJP) ತೀವ್ರ ಪೈಪೋಟಿ ನಡೆಯುತ್ತಿದ್ದು, ಸಿ ಟಿ ರವಿ(CT Ravi), ಚಲವಾದಿ ನಾರಾಯಣ ಸ್ವಾಮಿ(Chalavadi Narayana Swamy), ರವಿಕುಮಾರ್ (Ravikumar) ಸ್ಪರ್ಧೆಯಲ್ಲಿ ಇದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಮೂವರು ಹೆಸರು ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಮೂವರ ಹೆಸರು ಶಿಫಾರಸು ಮಾಡುವ ಬದಲು ನೇರವಾಗಿ ಚರ್ಚೆ ನಡೆಸಿದ್ದು, ಹೈಕಮಾಂಡ್ ಜೊತೆ ಮುಖಾಮುಖಿ ಚರ್ಚೆ ಮಾಡಲು ತೀರ್ಮಾನ ಮಾಡಲಾಗಿದೆ. ಚಲವಾದಿ ನಾರಾಯಣ ಸ್ವಾಮಿ ಪರ ಯಡಿಯೂರಪ್ಪ ಆಸಕ್ತಿ ತೋರಿದ್ದು, ದಲಿತ ಸಮುದಾಯಕ್ಕೆ ಅವಕಾಶ ನೀಡಲು ಚರ್ಚೆ ಮಾಡಲಾಗಿದೆಯಂತೆ. ದಲಿತರಿಗೆ ಅವಕಾಶ ನೀಡೋಣ ಎಂಬ ಮಾತುಕತೆ ನಡೆದಿದೆಯಂತೆ. ಆಂತರಿಕವಾಗಿ ಸಿಟಿ ರವಿ ಪರ ಕೆಲವು ಪರಿಷತ್(Vidhana parishad) ಸದಸ್ಯರ ಬೆಂಬಲ, ಸೀನಿಯಾರಿಟಿ, ಅನುಭವದ ಆಧಾರದ ಮೇಲೆ ಸಿಟಿ ರವಿ ಹೆಸರು. ಈ ಮಧ್ಯೆ ದೆಹಲಿಗೆ ತೆರಳಿರುವ ಸಿಟಿ ರವಿ. ರವಿಕುಮಾರ್ ಯಡಿಯೂರಪ್ಪ ಆಪ್ತರಾಗಿದ್ದು, ಆದರೂ ನಾರಾಯಣ ಸ್ವಾಮಿ ವಿಪಕ್ಷ ನಾಯಕನಾಗಲಿ (Leader of Opposition) ಎನ್ನುತ್ತಿರೋದೇಕೆ..? ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ವೀಕ್ಷಿಸಿ:  ವಾಲ್ಮೀಕಿ ನಿಗಮ 187 ಕೋಟಿ ಹಗರಣ ಪ್ರಕರಣ: ನಾಗೇಂದ್ರ, ಬಸನಗೌಡ ದದ್ದಲ್ ಎಸ್ಐಟಿ ವಿಚಾರಣೆಗೆ ಇಂದು ಹಾಜರು !