ವಾಲ್ಮೀಕಿ ನಿಗಮ 187 ಕೋಟಿ ಹಗರಣ ಪ್ರಕರಣ: ನಾಗೇಂದ್ರ, ಬಸನಗೌಡ ದದ್ದಲ್ ಎಸ್ಐಟಿ ವಿಚಾರಣೆಗೆ ಇಂದು ಹಾಜರು !

ಶಾಸಕ ಬಸನಗೌಡ ದದ್ದಲ್ ಕೂಡ ಇಂದು ವಿಚಾರಣೆಗೆ 
ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ಬಸನಗೌಡ ದದ್ದಲ್ 
ಇಂದು ಎಸ್ಐಟಿಯ ಹಿರಿಯ ಅಧಿಕಾರಿಗಳ ಮುಂದೆ ಹಾಜರು

First Published Jul 9, 2024, 11:16 AM IST | Last Updated Jul 9, 2024, 11:18 AM IST

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ಪ್ರಕರಣಕ್ಕೆ(Valmiki Corporation scam case) ಸಂಬಂಧಿಸಿದಂತೆ ಇಂದು ವಿಚಾರಣೆಗೆ ಮಾಜಿ ಸಚಿವ ನಾಗೇಂದ್ರ(Nagendra) ಹಾಜರಾಗಲಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ(SIT) ಅಧಿಕಾರಿಗಳು ನೋಟಿಸ್(Notice) ನೀಡಿದ್ದು, ಕಳೆದ ಶುಕ್ರವಾರ ನೋಟಿಸ್ ನೀಡಲಾಗಿತ್ತು. ಶಾಸಕ ಬಸನಗೌಡ ದದ್ದಲ್ಕೂಡ(MLA Basanagouda Daddal ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ. ಇವರು ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿದ್ದರು. ಇಂದು ಎಸ್ಐಟಿಯ ಹಿರಿಯ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಶೇಖರ್ ಡೆತ್‌ನೋಟ್‌ ಇದೀಗ ಸಂಕಷ್ಟ ತಂದಿಟ್ಟಿದೆ. ಡೆತ್‌ನೋಟ್‌ನಲ್ಲಿ ನಾಗೇಂದ್ರ, ದದ್ದಲ್ ಹೆಸರು ಉಲ್ಲೇಖ ಮಾಡಲಾಗಿದೆ. ಇಬ್ಬರ ಹೆಸರನ್ನೂ ಉಲ್ಲೇಖಿಸಿದ್ದ ಚಂದ್ರಶೇಖರ್, ತನಿಖೆ ವೇಳೆಯಲ್ಲಿಯೂ ಮಾಜಿ ಸಚಿವರ ಬಗ್ಗೆ ಆರೋಪಿಗಳ ಉಲ್ಲೇಖ ಮಾಡಲಾಗಿದೆ. ಎಸ್ಐಟಿ ಮುಖ್ಯಸ್ಥ ಎಡಿಜಿಪಿ ಮನಿಷ್ ಖರ್ಬೀಕರ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

ಇದನ್ನೂ ವೀಕ್ಷಿಸಿ:  ರಾಜ್ಯಮಟ್ಟದ ರೇನ್‌ಬೋ ಮೀಡಿಯಾ ಹಬ್ಬ ಆಯೋಜನೆ: ಪತ್ರಿಕೋದ್ಯಮದ ಪಲ್ಲಟಗಳು, ಮಾಧ್ಯಮ ಕ್ಸಿತಿಜ ಪುಸ್ತಕ ಬಿಡುಗಡೆ