ಸದನ ಸಮರಕ್ಕೆ ಮೈತ್ರಿಪಡೆ ಸಿದ್ಧತೆ..ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮಿತ್ರಪಡೆ ರೂಪುರೇಷೆ
ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಸಭೆ ನಡೆಸಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸಭೆ ನಡೆಯಿತು.
ಸೋಮವಾರದಿಂದ ಮಳೆಗಾಲದ ಅಧಿವೇಶನ (Monsoon session) ಆರಂಭವಾಗಲಿದ್ದು, ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಪಕ್ಷ ತೀರ್ಮಾನ ಮಾಡಿದೆ. ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್ (BJP-JDS) ನಾಯಕರು ಸಭೆ (Meeting) ನಡೆಸಿದರು. ವಿಪಕ್ಷ ನಾಯಕ ಆರ್. ಅಶೋಕ್(Opposition leader R Ashok) ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಮಂತ್ರಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿಧಾನಸಭೆ ಸದಸ್ಯರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು. ಸರ್ಕಾರದ ಭ್ರಷ್ಟಾಚಾರದ ಮೇಲೆ ಚರ್ಚೆ ನಡೆಯಿತು. ಸಂತಾಪ ಸೂಚನೆ ಬಳಿಕ ಮೊದಲ ದಿನವೆ ಬಿಜೆಪಿ- ಜೆಡಿಎಸ್ ಹೋರಾಟ ನಡೆಸಲಿವೆ. ಒಗ್ಗಟ್ಟಾಗಿ ಸರ್ಕಾರದ ಮೇಲೆ ಮುಗಿಬೀಳಲು ನಿರ್ಧಾರ ಮಾಡಲಾಗಿದೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಚರ್ಚೆಗೆ ನಿಲುವಳಿ ಸೂಚನೆ ಮಂಡನೆ, ಸ್ಪೀಕರ್ ಚರ್ಚೆಗೆ ಅವಕಾಶ ನೀಡದೆ ಇದ್ದರೆ ಧರಣಿಗೆ ನಿರ್ಧಾರ, ವಾಲ್ಮೀಕಿ ನಿಗಮದ ಚರ್ಚೆ ಬಳಿಕ ಮುಡಾ ಹಗರಣ ಚರ್ಚೆ, ಮುಡಾ ಭ್ರಷ್ಟಾಚಾರದ ಮೇಲೂ ನಿಲುವಳಿ ಸೂಚನೆ ಮಂಡನೆ ಮಾಡುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ: ಮಾಜಿ ಅಧ್ಯಕ್ಷ ಡಿಎಸ್ ವೀರಯ್ಯ ಬಂಧನ, ಪ್ರಕರಣ ಸಿಐಡಿಗೆ ವರ್ಗಾವಣೆ