News Hour: ಮರು ತನಿಖೆ ಬಗ್ಗೆ ಮೌನ ಮುರಿದ ಸಿಎಂ ಸಿದ್ದರಾಮಯ್ಯ

ಬಿಜೆಪಿಯ ಅವಧಿಯಲ್ಲಿ ಆಗಿರುವ ಅಕ್ರಮದ ಕುರಿತಾಗಿ ತನಿಖೆ ಮಾಡೋದಾಗಿ ಕಾಂಗ್ರೆಸ್‌ ಹೇಳುತ್ತಲೇ ಬಂದಿದೆ. ಬಿಟ್‌ಕಾಯಿನ್‌, ಆಕ್ಸಿಜನ್‌ ದುರಂತ, ಕೆಐಡಿಬಿ ಅವ್ಯವಹಾರ ಸೇರಿದಂತೆ ಎಲ್ಲಾ ಅಕ್ರಮಗಳ ವಿರುದ್ಧ ತನಿಖೆ ಮಾಡಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. 
 

First Published Jun 27, 2023, 11:10 PM IST | Last Updated Jun 27, 2023, 11:12 PM IST

ಬೆಂಗಳೂರು (ಜೂ.27): ಬಿಜೆಪಿ ಅವಧಿಯಲ್ಲಿನ ಅಕ್ರಮಗಳ ತನಿಖೆ ಮಾಡ್ತೀವಿ ಎಂದು ರಾಜ್ಯ ಸರ್ಕಾರದ ಸಚಿವರು ಹೇಳುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಕೂಡ ಆದಷ್ಟು ಬೇಗ ಇದರ ತನಿಖೆ ನಡೆಸಿ ಎಂದು ಒತ್ತಾಯಿಸಿದೆ. ಮುಖ್ಯಮಂತ್ರಿ ಆದ ಬಳಿಕ ಸಿದ್ಧರಾಮಯ್ಯ ಇದೇ ಮೊದಲ ಬಾರಿಗೆ ಈ ವಿಚಾರವಾಗಿ ಮಾತನಾಡಿ ತನಿಖೆ ಮಾಡೇ ಮಾಡ್ತೀವಿ ಎಂದಿದ್ದಾರೆ.

ಬಸವರಾಜ್‌ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ನಡೆದಿರುವ ಅಕ್ರಮ ಎಂದು ಹೇಳಲಾಗುವ ಬಿಟ್‌ಕಾಯಿನ್‌ ಹಗರಣ, ಪಿಎಸ್‌ಐ ನೇಮಕಾತಿ, ಕೊರೊನಾ ಉಪಕರಣ ಖರೀದಿ ಅವ್ಯವಹಾರಗಳ ತನಿಖೆಗೆ ಕಾಂಗ್ರೆಸ್‌ ಮುಂದಾಗಿದೆ. ಇನ್ನೊಂದೆಡೆ ಬಿಜೆಪಿ ಇದನ್ನೆಲ್ಲಾ ಮೊದಲು ಮಾಡಿಸಿ ಎಂದು ಸವಾಲೆಸೆದಿದೆ.

Slaughter: ಕಸಾಯಿಖಾನೆ ಹೊರಗೆ ಪ್ರಾಣಿ ವಧೆ ನಿಷೇಧಿಸಿದ ಬಿಬಿಎಂಪಿ

ಬಿಜೆಪಿ ಸರ್ಕಾರದ ಸಮಯದಲ್ಲಿ ಏನಾದರೂ ಅಕ್ರಮಗಳಾಗಿದ್ದರೆ, ತನಿಖೆ ಮಾಡಿಸಿ ಅದನ್ನು ಸಾಬೀತು ಮಾಡಿ. ಅದರೊಂದಿಗೆ ನೀವು ಸಿಎಂ ಆಗಿದ್ದ ಅವಧಿಯಲ್ಲಿ ಆಗಿದ್ದ ಅವ್ಯವಹಾರದ ಬಗ್ಗೆಯೂ ವರದಿ ಈಗಾಗಲೇ ಸಿದ್ಧವಾಗಿದೆ ಅದನ್ನೂ ಜನರ ಮುಂದಿಡಿ ಎಂದು ಬಿಜೆಪಿ ನಾಯಕ ಸಿಟಿ ರವಿ ಆಗ್ರಹಿಸಿದ್ದಾರೆ.

Video Top Stories