Yachting Training: ಕಾರವಾರದಲ್ಲಿ ಯಾಚಿಂಗ್ ಸ್ಪರ್ಧೆಗೆ ಭರ್ಜರಿ ತಯಾರಿ..!
ಹಲವು ಪ್ರವಾಸಿ ತಾಣಗಳಿಗೆ ಹೆಸರಾದ ಉತ್ತರ ಕನ್ನಡ ಜಿಲ್ಲೆಯು ಇದೀಗ ಸಾಹಸ ಪ್ರಿಯರಿಗೆ ಫೇವರೇಟ್ ಸ್ಪಾಟ್ ಆಗಿ ಬದಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಯಾಚಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ನಡೆಯುತ್ತಿದೆ.
ಕಾರವಾರ(ಫೆ.07): ಅರಬ್ಬಿ ಸಮುದ್ರದಲ್ಲಿ ಒಂದೆಡೆ ಕಡಲ ಹಕ್ಕಿಗಳ ಕಲರವ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಕೆಲವು ಕ್ರೀಡಾಪಟುಗಳು ತಾವೇನು ಕಮ್ಮಿಯಿಲ್ಲ ಎನ್ನುವಂತೆ ಯಾಚಿಂಗ್ ಅಭ್ಯಾಸ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಇವೆಲ್ಲ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದೇವಭಾಗ್ ಬೀಚ್‌ನಲ್ಲಿ.
ಹಲವು ಪ್ರವಾಸಿ ತಾಣಗಳಿಗೆ ಹೆಸರಾದ ಉತ್ತರ ಕನ್ನಡ ಜಿಲ್ಲೆಯು ಇದೀಗ ಸಾಹಸ ಪ್ರಿಯರಿಗೆ ಫೇವರೇಟ್ ಸ್ಪಾಟ್ ಆಗಿ ಬದಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ (Yachting Association of Karnataka) ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಯಾಚಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ನಡೆಯುತ್ತಿದೆ.
Lata Mangeshkar Death : ಲತಾ ಮಂಗೇಶ್ಕರ್ ಅಪ್ರತಿಮ ಐಕಾನ್, ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಸಂತಾಪ
ಫೆಬ್ರವರಿ ಅಂತ್ಯದಲ್ಲಿ ಅಬುಧಾಬಿಯಲ್ಲಿ (Abu Dhabi) ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಇಲ್ಲಿ ತರಬೇತಿ ನಡೆಯುತ್ತಿದ್ದು, ಯಾಚಿಂಗ್‌ಗೆ ಆಯ್ಕೆಯಾದ 8 ರಿಂದ 18 ವರ್ಷ ವಯಸ್ಸಿನ 26 ಶಿಬಿರಾರ್ಥಿಗಳು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.