Asianet Suvarna News Asianet Suvarna News

ಕೋಚ್ ಕಾಶೀನಾಥ್ ಮನೆಯ ನಾಯಿಯನ್ನು ಮುದ್ದಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ

Aug 24, 2021, 7:01 PM IST

ಪುಣೆ(ಆ.24): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆಯಾಡುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದ ಜಾವಲಿನ್‌ ಥ್ರೋ ಪಟು ನೀರಜ್ ಚೋಪ್ರಾ ಮಂಗಳವಾರ(ಆ.24)ವಾದ ಇಂದು ತಮ್ಮ ಮಾಜಿ ಕೋಚ್‌ ಕಾಶೀನಾಥ್ ನಾಯ್ಕ್ ಅವರ ನಿವಾಸಕ್ಕೆ ಭೇಟಿ ನೀಡಿ ಉಭಯಕುಶಲೋಪರಿ ವಿಚಾರಿಸಿದ್ದಾರೆ.

ಕಾಶೀನಾಥ್‌ ನಾಯ್ಕ್ ಜಾವಲಿನ್ ಥ್ರೋ ಪಟು ನೀರಜ್‌ ಚೋಪ್ರಾ ಅವರಿಗೆ ಕೋಚ್‌ ಆಗಿರಲಿಲ್ಲ. ಕಾಶೀನಾಥ್ ಯಾರೆನ್ನುವುದೇ ಗೊತ್ತಿಲ್ಲ. ನೀರಜ್‌ ಚೋಪ್ರಾಗೆ ವಿದೇಶಿ ಕೋಚ್‌ಗಳ ಬಳಿ ತರಬೇತಿ ನೀಡಲಾಗಿತ್ತು ಎಂದು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‌ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿಕೆ ನೀಡಿದ್ದರು. ಇದು ವಿವಾದದ ಸ್ವರೂಪವನ್ನು ಪಡೆದುಕೊಂಡಿತ್ತು.

ಕೋಚ್ ಕಾಶೀನಾಥ್ ಮನೆಗೆ ಭೇಟಿಕೊಟ್ಟ ಚಿನ್ನದ ಹುಡುಗ ನೀರಜ್‌ ಚೋಪ್ರಾ

ಇದೆಲ್ಲದರ ನಡುವೆ ಇಂದು ನೀರಜ್ ಚೋಪ್ರಾ ಪೂನಾದ ಕೋರೆಗಾಂವ್‌ನಲ್ಲಿರುವ ಕಾಶೀನಾಥ್ ನಾಯ್ಕ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಕಾಶೀನಾಥ್ ಪತ್ನಿ ಚೈತ್ರಾ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಮನಗೆ ಸ್ವಾಗತಿಸಿದ್ದಾರೆ. ಕಾಶೀನಾಥ್ ಅವರ ಮನೆಯೊಳಗೆ ಬರುತ್ತಿದ್ದಂತೆಯೇ ಅವರ ಮನೆಯ ಲ್ಯಾಬ್ರೊಡರ್ ನಾಯಿಯ ಜತೆ ಆಟವಾಡಿರುವ ವಿಡಿಯೋ ಏಷ್ಯಾನೆಟ್‌ ಸುವರ್ಣನ್ಯೂಸ್‌.ಕಾಂ ಗೆ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಾಗಿದೆ. ಹೀಗಿತ್ತು ನೋಡಿ ಆ ಸುಂದರ ಕ್ಷಣ