ಈರುಳ್ಳಿ ಖರೀದಿಸಲು ಹೋದವ ಹೆಣವಾಗಿ ಮನೆಗೆ!

ಈರುಳ್ಳಿ  ಬೆಲೆ ಏರಿಕೆಗೆ ಇಡೀ ದೇಶವೆ ತತ್ತರಿಸಿಹೋಗಿತ್ತು. 100 ಗಡಿ ದಾಟಿ ಮುಂದೆ ಸಾಗಿದ ಈರುಳ್ಳಿ ಇದೀಗ ಸಬ್ಸಿಡಿ ಮೂಲಕ ವಿತರಣೆ ಮಾಡಲಾಗುತ್ತಿದೆ. ಹೀಗೆ ಸಬ್ಸಡಿ ದರದ ಈರುಳ್ಳಿ ಖರೀದಿಸಲು ಹೋದ 65 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

First Published Dec 9, 2019, 7:10 PM IST | Last Updated Dec 9, 2019, 7:10 PM IST

ಆಂಧ್ರ ಪ್ರದೇಶ(ಡಿ.09): ಈರುಳ್ಳಿ  ಬೆಲೆ ಏರಿಕೆಗೆ ಇಡೀ ದೇಶವೆ ತತ್ತರಿಸಿಹೋಗಿತ್ತು. 100 ಗಡಿ ದಾಟಿ ಮುಂದೆ ಸಾಗಿದ ಈರುಳ್ಳಿ ಇದೀಗ ಸಬ್ಸಿಡಿ ಮೂಲಕ ವಿತರಣೆ ಮಾಡಲಾಗುತ್ತಿದೆ. ಹೀಗೆ ಸಬ್ಸಡಿ ದರದ ಈರುಳ್ಳಿ ಖರೀದಿಸಲು ಹೋದ 65 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ: ಈರುಳ್ಳಿಯನ್ನು ಬೇಕಾಬಿಟ್ಟಿ ದಾಸ್ತಾನು ಮಾಡುವಂತಿಲ್ಲ; ಕೇಂದ್ರದಿಂದ ಮಿತಿ.

ಕೃಷ್ಣ ಜಿಲ್ಲೆಯ ಗುಡಿವಾಡದ ರೈತು ಬಜಾರ್‌ನಲ್ಲಿ ಸಬ್ಸಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಜನರು ಈರುಳ್ಳಿ ಖರೀದಿಸಲು ಮುಗಿಬಿದ್ದಿದ್ದರು. ಖರೀದಿಗೆ ಹೆಚ್ಚಿನ ಜನರು ಆಗಮಿಸಿದ ಕಾರಣ ಸರದಿ ಸಾಲಿನಲ್ಲಿ ಖರೀದಿಗೆ ಮನವಿ ಮಾಡಲಾಗಿತ್ತು. 65 ವರ್ಷದ ಸಂಬೈಯ್ಯ ಕೂಡ ಈ ಸಾಲಿನಲ್ಲಿ ನಿಂತಿದ್ದರು.

ಇದನ್ನೂ ಓದಿ: ಇಳಿಯಿತು ಈರುಳ್ಳಿ ಬೆಲೆ : ಈಗೆಷ್ಟು ?

ಗಂಟೆಗಳ ಕಾಲ ಸಾಲಿನಲ್ಲಿ ನಿಂತ ಸಂಬೈಯ್ಯ ಹೃದಯಾಘಾತಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ವೈದ್ಯರು ಹೃದಯಾಘಾತದಿಂದ ಸಂಬೈಯ್ಯ ಸಾವನ್ನಪ್ಪಿರುವುದು ಖಚಿತಪಡಿಸಿದ್ದಾರೆ.