ಹುಬ್ಬಳ್ಳಿ-ದೆಹಲಿ ವಿಮಾನದಲ್ಲಿ ಜವಾರಿ ಭಾಷೆಯ ಸೊಗಡು: ವಿಡಿಯೋ ವೈರಲ್

ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನಯಾನ ಸೇವೆ ಆರಂಭವಾಗಿದ್ದು, ಈ ವೇಳೆ ಉತ್ತರ ಕರ್ನಾಟಕದ ಜವಾರಿ ಭಾಷೆ ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ.
 

First Published Nov 15, 2022, 5:39 PM IST | Last Updated Nov 15, 2022, 5:39 PM IST

ಹುಬ್ಬಳ್ಳಿ-ದೆಹಲಿ ನಡುವೆ ವಿಮಾನ ಸೇವೆ ಆರಂಭವಾಗಿದ್ದು, ಈ ವೇಳೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಅನೌನ್ಸ್ ಮಾಡಿ ಭಾಷಾ ಪ್ರೇಮ ಮೆರೆಯಲಾಗಿದೆ. ವಿಮಾನದಲ್ಲಿ ಇಂಡಿಗೋ ಕಂಪನಿ ಅಧಿಕಾರಿ ಅಕ್ಷಯ ಪಾಟೀಲ ನಮ್ಮ ಜವಾರಿ ಭಾಷೆಯಲ್ಲಿ ಸ್ವಾಗತ ಹಾಗೂ ವಿವರಣೆ ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ವಿಮಾನವು ದೆಹಲಿಗೆ ಮರುಪ್ರಯಾಣ ಬೆಳೆಸಿದ್ದು, ವಿಮಾನದಲ್ಲಿ ಉತ್ತರ ಕರ್ನಾಟಕ ಜವಾರಿ ಭಾಷೆಯಲ್ಲೇ ಸ್ವಾಗತ ಕೋರಲಾಗಿದೆ.  ಹಾಗೂ ಇದೇ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇದಕ್ಕೆ ಕಾರಣೀಕೃತರಾದ ಪ್ರಲ್ಹಾದ್ ಜೋಶಿಗೆ ಅಭಿನಂದನೆ ಸಲ್ಲಿಸಲಾಗಿದೆ.

ಬೆಂಗಳೂರಿನಲ್ಲಿ ವಿಡ ಎಲೆಕ್ಟ್ರಿಕ್ ಸ್ಕೂಟರ್ ಮೊದಲ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭ!

Video Top Stories