ನಾ ನಿನ್ನ ‘ಕೈ’ ಬಿಡಲಾರೆ...! ಡಿಕೆಶಿ ಜಾಮೀನಿಗಾಗಿ ದೇವೇಗೌಡ್ರಿಂದ ವಿಶೇಷ ಪೂಜೆ!
ಒಂದೆಡೆ ಉಪ-ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಮಾತಿನ ಸಮರ ಆರಂಭಿಸಿದ್ದಾರೆ. ಆದರೆ ಇನ್ನೊಂದೆಡೆ, ಜೆಡಿಎಸ್ ವರಿಷ್ಠ ದೇವೇಗೌಡರು ಅಚ್ಚರಿಯ ಹೇಳಿಕೆ ನೀಡಿದರು. ಬನ್ನಿ ಅವರೇನು ಹೇಳುತ್ತಿದ್ಧಾರೆ ನೋಡೋಣ...
ನವದೆಹಲಿ (ಸೆ.25): ಒಂದೆಡೆ ಉಪ-ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಮಾತಿನ ಸಮರ ಆರಂಭಿಸಿದ್ದಾರೆ. ಆದರೆ ಇನ್ನೊಂದೆಡೆ, ಜೆಡಿಎಸ್ ವರಿಷ್ಠ ದೇವೇಗೌಡರು ಅಚ್ಚರಿಯ ಹೇಳಿಕೆ ನೀಡಿದರು.
ನವದೆಹಲಿ ನಿವಾಸದಲ್ಲಿ ದೇವೇಗೌಡರನ್ನು ಡಿ.ಕೆ. ಸುರೇಶ್ ಭೇಟಿಯಾಗಿ, ಕಾನೂನು ಹೋರಾಟದ ಕುರಿತಾಗಿ ಮಾತುಕತೆ ನಡೆಸಿದರು. ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್‌ರನ್ನು ಭೇಟಿಯಾಗುವ ಇರಾದೆ ಇತ್ತು ಎಂದು ಕೂಡಾ ದೇವೇಗೌಡರು ಈ ಸಂದರ್ಭದಲ್ಲಿ ತಿಳಿಸಿದರು.
ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ, ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಆರೋಪದಲ್ಲಿ ಡಿಕೆಶಿಯನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದಾರೆ.
ಬನ್ನಿ ದೇವೇಗೌಡ್ರು ಏನು ಹೇಳುತ್ತಿದ್ಧಾರೆ ನೋಡೋಣ...