ಅಪ್ಪು ಕಳೆದುಕೊಂಡು ಕರ್ನಾಟಕ ತಬ್ಬಲಿಯಾಗಿದೆ: ಪುನೀತ್ ನೆನೆದ ಅರ್ಚಕರು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಒಂದು ವರ್ಷ ಆಗುತ್ತಿದೆ. ಆದರೆ ಅವರ ಅಭಿಮಾನಿಗಳ ಪ್ರೀತಿ ಒಂದು ಚೂರು ಕಮ್ಮಿ ಆಗಿಲ್ಲ. ಇದರ ನಡುವೆ ಪುನೀತ್ ಭೇಟಿ ನೀಡುತ್ತಿದ್ದ ದೇವಸ್ಥಾನದ ಅರ್ಚಕರು ಅಪ್ಪು ಅವರನ್ನು ನೆನಪು ಮಾಡಿಕೊಂಡಿದ್ದಾರೆ.

First Published Oct 21, 2022, 6:11 PM IST | Last Updated Oct 21, 2022, 6:11 PM IST

ನಟ ಪುನೀತ್ ರಾಜ್ ಕುಮಾರ್ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಇದ್ದರೆ ಪ್ರತಿದಿನ ದೇವಸ್ಥಾನಕ್ಕೆ ಬರುತ್ತಿದ್ದರು. ತುಂಬಾ ಬ್ಯುಸಿ ಇದ್ದರೆ ಒಂದು ನಿಮಿಷ ನಿಂತು ಬಾಗಿಲಲ್ಲಿ ನಮಸ್ಕಾರ ಮಾಡಿ ಹೋಗುತ್ತಿದ್ದರು ಎಂದು ಅರ್ಚಕರು ತಿಳಿಸಿದ್ದಾರೆ. ಅಪ್ಪು ಕುಟುಂಬಕ್ಕೂ, ದೇವಸ್ಥಾನಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಅವರು ಬೇಗ ಬೇಗ ಬಂದು ಒಂದು ಪ್ರದಕ್ಷಿಣೆ ಹಾಕಿ, ನಮಸ್ಕಾರ ಮಾಡಿ ಹೋಗುತ್ತಿದ್ದರು ಎಂದು ಹೇಳಿದ್ದಾರೆ. ಅವರನ್ನು ಅಗಲಿರುವ ನೋವು ತುಂಬಾ ಇದೆ, ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡು ಕರ್ನಾಟಕ ತಬ್ಬಲಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಟೀಕೆ ಮಾಡೋರನ್ನ ಉದಾಸೀನ ಮಾಡಬೇಕು: ಕಾಂತಾರ ಬಗ್ಗೆ ಅಪಸ್ವರ ಎತ್ತಿದ ನಟ ಚೇತನ್‌ಗೆ ವಚನಾನಂದ ಶ್ರೀ ಕೌಂಟರ್

Video Top Stories