ಇತಿಹಾಸ ಕೆದಕಿ ಎಚ್‌ಡಿಕೆ ಮೇಲೆ ಬಾಂಬ್ ಹಾಕಿದ ಜಮೀರ್!
* ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣಾ ಕಣ
* 'ನಿಮ್ಮ ಅಣ್ಣ ರೇವಣ್ಣ ಡಿಸಿಎಂ ಆಗೋದು ಬೇಡವಾಗಿತ್ತು'
* ಜಮೀರ್ ವರ್ಸಸ್ ಕುಮಾರಸ್ವಾಮಿ
* ಕೇರಳದಲ್ಲಿ ಪ್ರವಾಹ, ಜಲಕಂಟಕ
ಬೆಂಗಳೂರು(ಅ. 18) ದಿಗ್ಗಜ ನಾಯಕರು ಹಾನಗಲ್(Hangal) ಮತ್ತು ಸಿಂಧಗಿ (Sindhagi) ಅಖಾಡಕ್ಕೆ ಇಳಿದಿದ್ದಾರೆ. ಸಿದ್ದರಾಮಯ್ಯ(Siddaramaiah), ಸಿಎಂ ಬೊಮ್ಮಾಯಿ(Basavaraj Bommai) ಸೇರಿ ಎಲ್ಲರೂ ಚುನಾವಣಾ ಕಣ ಪ್ರವೇಶ ಮಾಡಿದ್ದಾರೆ. ಕುಮಾರಸ್ವಾಮಿ (HDKumaraswamy) ಅವರಿಗೆ ಜಮೀರ್ ಅಹಮದ್ (Zameer Ahmed Khan )ತಿರುಗೇಟು ಕೊಟ್ಟಿದ್ದಾರೆ. ಇತಿಹಾಸವನ್ನು ತೆರೆದಿರಿಸಬೇಕಾ ಎಂದು ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಹಿಟ್ಟಿಕೊಂಡಿದ್ದಮುಸ್ಲಿಂಮರಿಗೆ ಯಾರು ಒಳ್ಳೆಯದು ಮಾಡಿದರು ಸಮರ ಈಗ ಬೆಂಬಲಿಗರ ಕಚ್ಚಾಟಕ್ಕೆ ವೇದಿಕೆಯಾಗಿದೆ.
JDS ಶಾಸಕ ಗೌರಿಶಂಕರ್‌ಗೆ 'ಬಾಂಡ್; ಕಂಟಕ... MLA ಸ್ಥಾನಕ್ಕೆ ಕುತ್ತು?
ಬಿಜೆಪಿ, ಕಾಂಗ್ರೆಸ್ (BJP, Congress and JDS) ಹಾಗೂ ಜೆಡಿಎಸ್ ಮೂರು ಪಕ್ಷಗಳು ಸಿಂದಗಿ ಹಾಗೂ ಹಾನಗಲ್ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿದೆ. ನಾಯಕರ ವಾಕ್ಸಮರ ಜೋರಾಗಿದೆ. ಸಿದ್ದರಾಯಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರೆ, ಇತ್ತ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮಹಾ ಮಳೆಗೆ ಕೇರಳ ತತ್ತರಿಸಿದೆ. ಗುಡ್ಡಗಳು ಕುಸಿದಿದೆ. ಪ್ರವಾಹದಿಂದ ಮನೆಗಳು ಕೊಚ್ಚಿ ಹೋಗಿದೆ. ಪರಿಣಾಮ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗುಡ್ಡ ಅಡಿಯಲ್ಲಿ ಸಿಲುಕಿದ ಮೃತದೇಹ ಹೊರತೆಗೆಯಲು ಹರಹಾಸಪಡುತ್ತಿದ್ದಾರೆ. ಈಗಲೂ ಮಳೆ ಸುರಿಯುತ್ತಿದ್ದು, ಜನರ ಆತಂಕ ಹೆಚ್ಚಾಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ