Asianet Suvarna News Impact: ಕೋವಿಡ್ ನಿಯಮ ಉಲ್ಲಂಘಿಸಿ ಟೂರ್ ಹೋದ ಕ್ಲೂನಿ ಶಾಲೆಗೆ ನೋಟಿಸ್

  • ಸರಕಾರದ ನಿಯಮ ಉಲ್ಲಂಘಿಸಿ ಶಾಲಾ ಪ್ರವಾಸ ಹೋಗಿದ್ದ ಕ್ಲೂನಿ ಶಾಲೆ
  • ಬೆಂಗಳೂರಿನ ಖಾಸಗಿ ಶಾಲೆ ಕ್ಲೂನಿ ಕಾನ್ವೆಂಟ್ ಎಡವಟ್ಟು
  •  4 ದಿನಗಳ ಪ್ರವಾಸಕ್ಕೆ 130 ವಿದ್ಯಾರ್ಥಿಗಳಿಂದ 10 ಸಾವಿರ ಹಣ ವಸೂಲಿ 
First Published Dec 11, 2021, 3:17 PM IST | Last Updated Dec 11, 2021, 3:36 PM IST

ಬೆಂಗಳೂರು (ಡಿ.11): ಕೊರೊನಾ ಆತಂಕದ ಮಧ್ಯೆಯೂ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಪ್ರವಾಸ ಹೋಗಿದ್ದ  ಬೆಂಗಳೂರಿನ ಜಾಲಹಳ್ಳಿಯ ಕ್ಲೂನಿ ಕಾನ್ವೆಂಟ್  ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಸುವರ್ಣ ನ್ಯೂಸ್ ಶುಕ್ರವಾರ ಸುದೀರ್ಘ ವರದಿ ಬಿತ್ತರಿಸಿತ್ತು. ಕ್ಲೂನಿ ಕಾನ್ವೆಂಟ್ ಅಧ್ಯಾಪಕರು ಸುಮಾರು 130 ಮಕ್ಕಳನ್ನು ಒತ್ತಾಯಪೂರ್ವಕವಾಗಿ 4 ದಿನಗಳ ಕಾಲಕ್ಕೆ ಹೈದರಾಬಾದ್ ಗೆ  ಪ್ರವಾಸಕ್ಕೆ ಕರೆದೊಂಡು ಹೋಗಿದ್ದರು. ಪ್ರತಿ ವಿದ್ಯಾರ್ಥಿಯಿಂದ 10 ಸಾವಿರ ಹಣ ವಸೂಲಿ ಮಾಡಲಾಗಿದ್ದು,  ಕೊರೊನಾ, ಒಮಿಕ್ರಾನ್ ವೈರಸ್ ಆತಂಕದ ನಡುವೆಯೂ ಈ ಖಾಸಗಿ ಶಾಲೆ ಸರಕಾರದ ಆದೇಶ ಉಲ್ಲಂಘಿಸಿತ್ತು.

Egg Scheme: ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಭಾಲ್ಕಿಯ ಸ್ವಾಮೀಜಿ ವಿರೋಧ, ಮೌನ ವಹಿಸಿದ ಸಿಎಂ

ಸುವರ್ಣ ನ್ಯೂಸ್ ವರದಿಗೆ ಎಚ್ಚೆತ್ತ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಬೆಂಗಳೂರು ಉತ್ತರ ತಾಲೂಕು ಬಿಇಒ ಕಮಲಾಕರ್ ಟಿ.ಎನ್. ಉತ್ತರಿಸುವಂತೆ  ಕ್ಲೂನಿ ಕಾನ್ವೆಂಟ್  ಶಾಲೆಗೆ ನೋಟಿಸ್ ನೀಡಿದ್ದಾರೆ. ವರದಿ ಬಂದ ಬಳಿಕ ಶಾಲೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಮಧ್ಯೆ, ಶಾಲೆ ಪ್ರಾಂಶುಪಾಲರು ಪ್ರವಾಸಕ್ಕೆ ಹೋಗಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪ್ರವಾಸ ಮುಗಿಸಿ ಮಕ್ಕಳು ಸೋಮವಾರ ಅಂದರೆ ಡಿ.13 ರಂದು ವಾಪಸ್ಸಾಗಲಿದ್ದಾರಂತೆ.

Video Top Stories