Egg Scheme: ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಭಾಲ್ಕಿಯ ಸ್ವಾಮೀಜಿ ವಿರೋಧ, ಮೌನ ವಹಿಸಿದ ಸಿಎಂ
- ಅಪೌಷ್ಟಿಕತೆಯಿಂದ ಬಳಲುತ್ತಿರುವ ಶಾಲಾ ಮಕ್ಕಳಿಗೆ ಮೊಟ್ಟೆ
- ಮೊಟ್ಟೆ ವಿತರಣೆಗೆ ಬಾಲ್ಕಿ ಸ್ವಾಮೀಜಿ ವಿರೋಧ
- ಸಸ್ಯಹಾರದಲ್ಲಿ ಸಾಕಷ್ಟು ಆಹಾರವಿದೆ ಎಂದ ಸ್ವಾಮೀಜಿ
ಬೀದರ್(ಡಿ.11) ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಸಿಯೂಟದ ಜೊತೆ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವಂತೆ ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು ಆದ್ರೆ,ಇದು ಪರ-ವಿರೋಧಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಮಕ್ಕಳಲ್ಲಿ ಪೌಷ್ಠಿಕ ಆಹಾರ ಕೊರತೆ ಕಂಡು ಬಂದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬೀದರ್ ಪ್ರವಾಸದ ಸಂದರ್ಭದಲ್ಲಿ ಭಾಲ್ಕಿಯ ಶ್ರೀ ಡಾ.ಚನ್ನಬಸವ ಪಟ್ಟದ್ದೆವರ ಆಶ್ರಮದಲ್ಲಿ ನಡೆಯುತ್ತಿರುವ ಸಿದ್ದೇಶ್ವರ ಶ್ರೀಗಳ ಪ್ರವಚನ ಆಲಿಸಲು ಆಗಮಿಸಿದ್ದರು.
Egg Distribution in Schools: ಮಕ್ಕಳಿಗೆ ಮೊಟ್ಟೆ ಕೊಟ್ಟರೆ ತಪ್ಪಲ್ಲ: ಬಿಜೆಪಿ ಶಾಸಕ ರಘುಪತಿ ಭಟ್
ಈ ವೇಳೆ ಭಾಲ್ಕಿ ಶ್ರೀಗಳಾದ ಬಸವಲಿಂಗ ಪಟ್ಟದ್ದೆವರು ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡೋದು ಬೇಡ, ಇದಕ್ಕೆ ನಮ್ಮ ಎಲ್ಲಾ ಮಠಾಧೀಶರ ವಿರೋಧ ಇದೆ. ಅಪೌಷ್ಠಿಕತೆ ನಿವಾರಣೆ ಮಾಡಲು ಸಸ್ಯಹಾರದಲ್ಲಿ ಸಾಕಷ್ಟು ಆಹಾರಗಳು ಇವೆ. ಮಕ್ಕಳಿಗೆ ಬಾಳೆ ಹಣ್ಣು ತಿನ್ನಬೇಕೋ, ಮೊಟ್ಟೆ ತಿನ್ನಬೇಕೋ ತಿಳಿಯುವುದಿಲ್ಲ ಸರ್ಕಾರ ಈ ನಿರ್ಧಾರ ಹಿಂಪಡೆದರೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ. ಮಠಾಧೀಶರ ಈ ಮನವಿ ಪಡೆದುಕೊಂಡ ಸಿಎಂ ಬಸವರಾಜ್ ಬೊಮ್ಮಾಯಿ ಮೊಟ್ಟೆ ವಿತರಣೆ ವಿಚಾರದಲ್ಲಿ ಸಂಪೂರ್ಣ ಮೌನ ವಹಿಸಿ ಯಾವುದೇ ಪ್ರತಿಕ್ರಿಯೆ ನೀಡದೇ ವಾಪಸಾಗಿದ್ದಾರೆ. ಒಟ್ಟಿನಲ್ಲಿ ಮಠಾಧೀಶರ ಮನವಿಯನ್ನು ಪರಿಗಣಿಸುತ್ತಾರೋ ಇಲ್ಲವೋ ನೋಡಬೇಕಾಗಿದೆ.