ಹವಾ ಕ್ರಿಯೇಟ್ ಮಾಡಿದ 'ರಜನೀಕಾಂತ್' ದರ್ಬಾರ್..!
ಸೂಪರ್ ಸ್ಟಾರ್ ರಜನೀಕಾಂತ್ ಹೊಸ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಖಡಕ್ ಲುಕ್, ಡಯಲಾಗ್ ಹೊಡೆಯುವ ತಲೈವಾನ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನೇನಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ತಲೈವಾನದ್ದೇ ದರ್ಬಾರು ಅನ್ನೋ ಸೂಚನೆ ಕೊಡ್ತಿದೆ ಸಿನಿಮಾ ಟ್ರೇಲರ್.
ಬೆಂಗಳೂರು(ಡಿ.18): ಸೂಪರ್ ಸ್ಟಾರ್ ರಜನೀಕಾಂತ್ ಹೊಸ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಖಡಕ್ ಲುಕ್, ಡಯಲಾಗ್ ಹೊಡೆಯುವ ತಲೈವಾನ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನೇನಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ತಲೈವಾನದ್ದೇ ದರ್ಬಾರು ಅನ್ನೋ ಸೂಚನೆ ಕೊಡ್ತಿದೆ ಸಿನಿಮಾ ಟ್ರೇಲರ್.
ರಜನೀಕಾಂತ್ ಅಭಿಯನದ ದರ್ಬಾರ್ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಮುರುಗದಾಸ್ ರಜನಿ ಕಾಂಬಿನೇಷನ್‌ನಲ್ಲಿ ಬರ್ತಿರುವ ಸಿನಿಮಾ ಆರಂಭದಲ್ಲಿಯೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಟೈಟಲ್ ಮತ್ತು ಫಸ್ಟ್‌ಲುಕ್‌ನಿಂದಲೇ ಸೌಂಡ್ ಮಾಡಿದ ಸಿನಿಮಾ ಟ್ರೇಲರ್ ಮತ್ತಷ್ಟು ಕುತೂಹಲ ಸೃಷ್ಟಿಸಿದೆ.
'2021ಕ್ಕೆ ತಮಿಳುನಾಡಿನಲ್ಲಿ ಪವಾಡ'
ಪಾಂಡಿಯನ್ ಸಿನಿಮಾ ನಂತ್ರ ಮತ್ತೆ ಬಾರಿ ಪೊಲೀಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಪೆಷಲ್ ಅಂದ್ರೆ ಬ್ಯಾಡ್ ಕಾಪ್ ಆಗಿ ಕಾಣಿಸಿಕೊಳ್ತಿದ್ದಾರೆ. ಅಭಿಮಾನಿಗಳನ್ನು ರಜನಿ ರಂಜಿಸ್ತಾರೆ ಅನ್ನೋ ಸೂಚನೆ ಟ್ರೇಲರ್‌ನಲ್ಲಿ ಸಿಕ್ಕಿದೆ. ರಜನಿ ಮ್ಯಾನರಿಸಂಗೆ ಎಂಥವರೂ ಫಿದಾ ಆಗಲೇ ಬೇಕು.
ಚಿತ್ರದ ಶೂಟಿಂಗ್ ಮುಗಿದಿದೆ. ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಅಭಿಮಾನಿಗಳಿಗೆ ಈ ಸಿನಿಮಾ ಗಿಫ್ಟ್ ಆಗಲಿದೆ. ರಜನಿ ಜೊತೆ ಲೇಡಿಸ್ ಸೂಪರ್ ಸ್ಟಾರ್ ನಯನ್ ತಾರಾ ಅಭಿನಯಿಸುತ್ತಿದ್ದಾರೆ.