Asianet Suvarna News Asianet Suvarna News

ಹೊಸ ವರ್ಷದ ಆರಂಭದಲ್ಲೇ ಸೆಟ್ಟೇರಲಿದೆ ಮದಗಜ..!

ರೋರಿಂಗ್ ಸ್ಟಾರ್‌ ಶ್ರೀಮುರುಳಿ ಈ ಬಾರಿ ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶ್ರೀಮುರುಳಿ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಬರ್ತ್‌ಡೇ ಸ್ಪೆಷಲ್ ಆಗಿ ಅವರ ಮುಂದಿನ ಸಿನಿಮಾದ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ. 

ಬೆಂಗಳೂರು(ಡಿ.18): ರೋರಿಂಗ್ ಸ್ಟಾರ್‌ ಶ್ರೀಮುರುಳಿ ಈ ಬಾರಿ ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶ್ರೀಮುರುಳಿ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಬರ್ತ್‌ಡೇ ಸ್ಪೆಷಲ್ ಆಗಿ ಅವರ ಮುಂದಿನ ಸಿನಿಮಾದ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ. 

ಭರಾಟೆ ಸಿನಿಮಾದ ಮೂಲಕ ಸದ್ದು ಮಾಡಿದ ರೋರಿಂಗ್ ಸ್ಟಾರ್ ಅವರ 'ಮದಗಜ' ಸಿನಿಮಾ ಹೊಸ ವರ್ಷದ ಆರಂಭದಲ್ಲೇ ಸೆಟ್ಟೇರಲಿದೆ. ಮದಗಜ ಟೈಟಲ್ ಬದಲಾಗುತ್ತೆ, ಸಿನಿಮಾ ಆಗಲ್ವಂತೆ ಎನ್ನುವ ಗಾಸಿಪ್‌ಗೆ ಶ್ರೀಮುರುಳಿ ತೆರೆ ಎಳೆದಿದ್ದಾರೆ. ಮದಗಜ ಟೈಟಲ್‌ನಲ್ಲೇ ಸಿನಿಮಾ ಆಗುತ್ತೆ ಎನ್ನುವುದನ್ನು ನಿರ್ದೇಶಕ ಮಹೇಶ್‌ ಹೇಳಿದ್ದಾರೆ. ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಕಹಾಕಿದ್ದಾರೆ.

ಹೊಸವರ್ಷಕ್ಕೆ ಹೊಸ ಕಾನ್ಸೆಪ್ಟ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ
 
ಈಗಾಗಲೇ ಅಯೋಗ್ಯ ಸಿನಿಮಾ ಮೂಲಕ ಭರವಸೆಯ ನಿರ್ದೇಶಕ ಎಂಬ ಹೆಸರು ಮಾಡಿರುವ ಮಹೇಶ್ ಕುಮಾರ್ ಮದಗಜ ಸಿನಿಮಾಗೆ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಈಗಾಗಲೇ ಚಾಮುಂಡೇಶ್ವರಿ ಆಶಿರ್ವಾದ ಪಡೆದು ಸ್ಕ್ರಿಪ್ಟ್ ಪೂಜೆ ಮಾಡಿರುವ ತಂಡ ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಮುಹೂರ್ತ ಮಾಡಲು ಪ್ಲಾನ್ ಮಾಡಿದೆ.

ರಮ್ಯಾ ಕೃಷ್ಣ, ರವಿಶಂಕರ್, ಸಾಧುಕೋಕಿಲ, ಜಗಪತಿ ಬಾಬು, ಚಿಕ್ಕಣ್ಣ, ಶಿವರಾಜ್‌ ಕೆ.ಆರ್ ಪೇಟೆ ಶ್ರೀಮುರುಳಿಗೆ ಸಾಥ್‌ ಕೊಡಲಿದ್ದಾರೆ. ನಾಯಕಿಯರ ಲಿಸ್ಟ್‌ನಲ್ಲಿ ಆಶಿಕಾ ರಂಗನಾಥ್ ಹಾಗೂ ರಚಿತಾ ರಾಮ್‌ ಇಬ್ಬರ ಹೆಸರೂ ಕೇಳಿ ಬಂದಿದೆ.

ವೇದಿಕೆಯಲ್ಲೇ ಬಿದ್ರು ಅಕ್ಷಯ್, 'ಗುಡ್‌ನ್ಯೂಸ್‌'ಗೆ ಸಿಕ್ತು ಬಿಟ್ಟಿ ಪ್ರಮೋಷನ್..!

Video Top Stories