Home Minister: ನಿಜವಾದ 'ಹೋಮ್ ಮಿನಿಸ್ಟರ್' ಉಪೇಂದ್ರನಾ..? ವೇದಿಕಾನಾ.?

ತರಕಾರಿ ತರೋದು, ಪಾತ್ರ ತೊಳೆಯೋದು, ಮನೆ ಕ್ಲೀನ್‌ ಮಾಡೋದು ಸೇರಿದಂತೆ ಮನೆ ಕೆಲಸಗಳನ್ನು ಹೆಣ್ಣು ಮಕ್ಕಳೇ ಮಾಡಬೇಕು ಎಂದು ನಾವು ಸೀಮಿತ ಮಾಡಿಬಿಟ್ಟಿದ್ದೇವೆ. ಆ ಕೆಲಸಗಳಲ್ಲಿ ಗಂಡಸರಿಗೂ ಪಾಲಿದೆ, ನಮ್ಮ ಜವಾಬ್ದಾರಿ ಕೂಡ ಅನ್ನೋದು ತುಂಬಾ ಜನ ಮರೆತಿದ್ದೇವೆ. ಮರೆತಿರುವ ಅಂಥ ಹಲವು ವಿಷಯಳನ್ನು 'ಹೋಂ ಮಿನಿಸ್ಟರ್' (Home Minister) ನೆನಪಿಸುತ್ತಿದೆ. 

First Published Apr 2, 2022, 2:53 PM IST | Last Updated Apr 2, 2022, 2:56 PM IST

ತರಕಾರಿ ತರೋದು, ಪಾತ್ರ ತೊಳೆಯೋದು, ಮನೆ ಕ್ಲೀನ್‌ ಮಾಡೋದು ಸೇರಿದಂತೆ ಮನೆ ಕೆಲಸಗಳನ್ನು ಹೆಣ್ಣು ಮಕ್ಕಳೇ ಮಾಡಬೇಕು ಎಂದು ನಾವು ಸೀಮಿತ ಮಾಡಿಬಿಟ್ಟಿದ್ದೇವೆ. ಆ ಕೆಲಸಗಳಲ್ಲಿ ಗಂಡಸರಿಗೂ ಪಾಲಿದೆ, ನಮ್ಮ ಜವಾಬ್ದಾರಿ ಕೂಡ ಅನ್ನೋದು ತುಂಬಾ ಜನ ಮರೆತಿದ್ದೇವೆ. ಮರೆತಿರುವ ಅಂಥ ಹಲವು ವಿಷಯಳನ್ನು 'ಹೋಂ ಮಿನಿಸ್ಟರ್' (Home Minister) ನೆನಪಿಸುತ್ತಿದೆ. 

ಯುಗಾದಿ ಹಬ್ಬಕ್ಕೆ ಬಂದ ಹೊಸ 'ಹೋಂ ಮಿನಿಸ್ಟರ್‌'ಗೆ ಕೊತ್ತಂಬರಿ ಕಟ್ಟಿನ ಬೆಲೆ ಮಾತ್ರ ಗೊತ್ತಿಲ್ಲ!

ಉಪೇಂದ್ರ (Upendra) ವೇದಿಕಾ (vedika) ಅಭಿನಯದ 'ಹೋಂ ಮಿನಿಸ್ಟರ್' ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ. 'ಐ ಲವ್ ಯೂ' (I Love You) ಚಿತ್ರ ಬಂದು ಮೂರು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಹೋಮ್ ಮಿನಿಸ್ಟರ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬಂದಿದ್ದಾರೆ. ಸುಜಯ್ ಕೆ ಶ್ರೀಹರಿ ಅವರ ನಿರ್ದೇಶನದ ಹೋಮ್ ಮಿನಿಸ್ಟರ್ ಚಿತ್ರ ಎಲ್ಲಾ ರೀತಿಯ ಪ್ರೇಕ್ಷಕರನ್ನು ತಲುಪುವ ಹಾಸ್ಯಮಯ ಚಿತ್ರವಾಗಿದ್ದು, ಸಿನಿ ಪ್ರೇಕ್ಷಕರ ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಉಪ್ಪಿ ಹೆಂಡತಿ ಆದ್ರೆ, ಗಂಡನ ಹಾಗೆ ನಟಿಸಿದ್ದಾರೆ ನಟಿ ವೇಧಿಕಾ. ಈ ಇಬ್ಬರ ಕಾಂಬಿನೇಷನ್ ಯುಗಾದಿ ಹಬ್ಬದ ಹೋಳಿಗೆ ತುಪ್ಪದ ಹಾಗೆ ರುಚಿ ರುಚಿಯಾಗಿ ಮೂಡಿ ಬಂದಿದ್ದು, ಉಪೇಂದ್ರ ನಟಿ ವೇದಿಕಾ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ಮಾಡುತ್ತಿದೆ. 

ಹೋಮ್ ಮಿನಿಸ್ಟರ್‌ ಚಿತ್ರದ ತಾರಾಬಳಗದಲ್ಲಿ ಚಾಂದಿನಿ, ಬೇಬಿ ಆದ್ಯಾ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕಾ ಅವಿನಾಶ್, ಲಾಸ್ಯಾ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪೂರ್ಣ ನಾಯ್ಡು ನಿರ್ಮಾಣ ಮಾಡಿರೋ ಈ ಸಿನಿಮಾ ಮೊದಲ ದಿನ ಜನ ಮನ ಗೆದ್ದಿದೆ.

Video Top Stories