ಜನಮನ ಗೆದ್ದ ಅಂಧರ ರಾಜ್ಯಮಟ್ಟದ ಚೆಸ್ ಸ್ಪರ್ಧೆ..!

* ರಾಜ್ಯ ಮಟ್ಟದಲ್ಲಿ ಅಂಧರ ಚೆಸ್‌ ಸ್ಪರ್ಧೆ ಆಯೋಜಿಸಿದ್ದ ರಾಯಚೂರು

* ರಾಯಚೂರು ನಗರದಲ್ಲಿ 2 ದಿನಗಳ ಕಾಲ ರಾಜ್ಯ ಮಟ್ಟ್ಟದ ಅಂಧರ ಚೆಸ್ ಸ್ಪರ್ಧೆ

* ರಾಜ್ಯದ ಮೂಲೆ ಮೂಲೆಗಳಿಂದ 110 ಕ್ಕೂ ಹೆಚ್ಚು ಅಂಧ ಅಭ್ಯರ್ಥಿಗಳು ಭಾಗಿ 

First Published Apr 25, 2022, 3:15 PM IST | Last Updated Apr 25, 2022, 3:15 PM IST

ರಾಯಚೂರು: ಅವರಿಗೆ ಎರಡು ಕಣ್ಣು ಕಾಣುವುದಿಲ್ಲ. ಆದ್ರೂ ಎಲ್ಲರಂತೆ ಪ್ರತಿವೊಂದು ವಿಷಯವೂ ಗ್ರಹಿಸಿ ಮಾತನಾಡುತ್ತಾರೆ. ಅಷ್ಟೇ ಯಾಕೆ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿಗಾಗಿ ಪೈಪೋಟಿ ನಡೆಸಿದ್ರು. ಎಲ್ಲಿ ನಡೆಯಿತು ಚೆಸ್ ಪಂದ್ಯಗಳು ಅಂತೀರಾ ಈ ವರದಿ ನೋಡಿ.

ಕುದುರೇ ಓಡುತ್ತಿಲ್ಲ, ಈ ಸೈನಿಕ ಮುಂದಕ್ಕೆ ಹೋಗುತ್ತಿಲ್ಲ. ನಮ್ಮ ಮಂತ್ರಿ ದರ್ಬಾರ್ ಜೋರಾಗಿ ನಡೆಯುತ್ತಿದೆ. ನಮ್ಮ ರಾಜ್ಯ ಮನೆಯೇ ಖಾಲಿ ಮಾಡಿಲ್ಲ. ಒಂಟೆ ಓಟಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಹೀಗೆ ಹೇಳುತ್ತಾ ಒಬ್ಬರಿಗೆ ಒಬ್ಬರು ಪೈಪೋಟಿ ನೀಡುತ್ತಾ ಗೆಲುವಿಗಾಗಿ ದಾಪುಗಾಲು ಹಾಕುತ್ತಾ ಬ್ಯುಸಿಯಾಗಿರುವ ಸ್ಪರ್ಧಾಳುಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಯಚೂರು ನಗರದ ಮಾಲಿಕಪ್ರಭು ಅಂಧರ ಶಾಲೆಯ ಆವರಣದಲ್ಲಿ.

2000 ಕಡಕ್‌ನಾಥ್‌ ಕೋಳಿ ಖರೀದಿಸಿದ ಎಂ.ಎಸ್‌.ಧೋನಿ

ಯೆಸ್. ರಾಯಚೂರು ನಗರದಲ್ಲಿ 2 ದಿನಗಳ ಕಾಲ ರಾಜ್ಯ ಮಟ್ಟ್ಟದ ಅಂಧರ ಚೆಸ್ ಸ್ಪರ್ಧೆ-2022 ನಡೆಯಿತು. ಶ್ರೀಮಾಣಿಕಪ್ರಭು ಅಕಾಡೆಮಿ ಫಾರ್ ಬ್ಲೈಂಡ್ ಹಾಗೂ ಕರ್ನಾಟಕ ಅಂಧರ ಚದುರಂಗ ಸಂಸ್ಥೆ ಆಯೋಜನೆ ಮಾಡಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯದ ಮೂಲೆ ಮೂಲೆಗಳಿಂದ 110 ಕ್ಕೂ ಹೆಚ್ಚು ಅಂಧ ಅಭ್ಯರ್ಥಿಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 22 ಜಿಲ್ಲೆಗಳಿಂದ ಆಗಮಿಸಿದ ಅಂಧ ಮಹಿಳೆಯರು ಹಾಗೂ ಪುರುಷರು ಮತ್ತು ಮಕ್ಕಳು, ಕಣ್ಣು ಕಾಣದಿದ್ದರೂ ಚೆಸ್ ಗೆಲುವಿಗಾಗಿ ಹರ ಸಾಹಸಪಟ್ಟರು. ಇಂತಹ ರಾಜ್ಯ ಮಟ್ಟದ ಚೆಸ್ ಸ್ಪರ್ಧೆ ನಮಗೆ ಒಂದು ವೇದಿಕೆ ಕಲ್ಪಿಸಿದೆ ಅಂತಾರೇ ಚೆಸ್ ಸ್ಪರ್ಧಿಗಳು.