ನರಕವಾಯಿತೇಕೆ ಭೂಲೋಕ ಸ್ವರ್ಗ? ಕ್ಷಣಾರ್ಧದಲ್ಲಿ ಅವಘಡ, ಭೀಕರ ದೃಶ್ಯಗಳು, ಭಯಾನಕ ಪರಿಸ್ಥಿತಿ!

ಕಳೆದೊಂದು ವಾರದಿಂದ ನರಕವಾಯ್ತು ಭೂಲೋಕ ಸ್ವರ್ಗ!
ಕ್ಷಣಕ್ಷಣಕ್ಕೂ ಏರುತ್ತಿದೆ ಮರಣ ಹೊಂದಿದವರ ಸಂಖ್ಯೆ!
60ಕ್ಕೂ ಅಧಿಕ ಮಂದಿಯ ಜೀವ ನುಂಗಿದೆ ಭೂಕುಸಿತ!

First Published Aug 17, 2023, 2:50 PM IST | Last Updated Aug 17, 2023, 2:50 PM IST

ಹಿಮಾಚಲ ಪ್ರದೇಶದಲ್ಲಿ ಯಮರಾಯ ವಿಹಾರ ಮಾಡ್ತಿದ್ದಾನೆ. ಉತ್ತರಾಖಂಡದಲ್ಲಿ ಮೊಳಗಿದೆ ಮರಣ ಮೃದಂಗ. ರಣಭೀಕರ ಮಳೆಗೆ ಬೆಟ್ಟ ಕುಸಿಯುತ್ತಿದೆ. ಮನೆಗಳು ಉರುಳ್ತಿದ್ದಾವೆ. ಊರಿಗೆ ಊರೇ ಮುಳುಗ್ತಾ ಇದೆ. ಜನ ದಿಕ್ಕೆಟ್ಟು ಕಂಗಾಲಾಗಿದ್ದಾರೆ. ಅಲ್ಲಿ ಉಂಟಾಗಿರೋ ಮೇಘಸ್ಫೋಟದ ಪ್ರಳಯ ತಾಂಡವ ಭೀಕರವಾಗಿದೆ. ನೋಡೋಕೆ ಭೂ ಲೋಕ ಸ್ವರ್ಗದ ಹಾಗೆ ಕಾಣೋ ಹಿಮಾಚಲ ಪ್ರದೇಶ(Himachal Pradesh), ಇವತ್ತು ನರಕದ ಹಾಗೆ ಬದಲಾಗಿದೆ. ಒಂದೆಡೆ ಭೂಕುಸಿತವಾದ್ರೆ(landslides), ಮತ್ತೊಂದೆಡೆ ಜಲಪ್ರವಾಹ(flood). ಈ ಎರಡೂ ಕಾರಣಗಳಿಂದ ಹಿಮಾಚಲ ನಲುಗುತ್ತಿದೆ. ಈಗಾಗ್ಲೇ ಬರೋಬ್ಬರಿ 66 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ವರದಿಗಳು ಹೇಳ್ತಾ ಇವೆ. ಅಷ್ಟೇ ಅಲ್ಲ, ಇದೇ ರೀತಿ ಪ್ರವಾಹ ಪರಿಸ್ಥಿತಿ ಮುಂದುವರೆದದ್ದೇ ಆದಲ್ಲಿ, ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದೂ ಹೇಳಲಾಗುತ್ತಿದೆ. ಕ್ಷಣಕ್ಷಣಕ್ಕೂ ಭಯ ಹೆಚ್ಚಿಸೋ ರಣಭೀಕರ ವಾತಾವರಣ ಹಿಮಾಚಲ ಪ್ರದೇಶದಲ್ಲಿದ್ರೆ, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಂತೂ ಮರಣ ಮೃದಂಗ ಮಾರ್ದನಿಸ್ತಾ ಇದೆ. ಈ ಎರಡು ಜಿಲ್ಲೆಗಳಿಂದಲೇ, 42 ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಾ ಇದೆ.

ಇದನ್ನೂ ವೀಕ್ಷಿಸಿ:  ಬೆಂಗಳೂರಿಗೆ ಬಂದವನಿಗೆ ಹುಡುಗಿ ಕೊಟ್ಟಳು ಶಾಕ್..!: ಸಾಯೋ ಮೊದಲು ಸ್ಟೇಟಸ್‌ನಲ್ಲಿ ಬೆತ್ತಲೆ ವಿಡಿಯೋಗಳು..!