ಸಿಕ್ಕಾಪಟ್ಟೆ ಸಿಟ್ಟು ಬರುತ್ತಾ ? ಇಲ್‌ ಹೋದ್ರೆ ಕೈಗೆ ಸಿಕ್ಕಿದ್ದನ್ನೆಲ್ಲಾ ಒಡೆದು ಹಾಕ್ಬೋದು!

ನಿಮ್ಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತಾ ? ಸಿಟ್ಟು ಬಂದ್ರೆ ತಡ್ಕೊಳ್ಳೋಕೆ ಆಗಲ್ಲ. ಕೈಗೆ ಸಿಕ್ಕಿದ್ದನ್ನೆಲ್ಲಾ ಎತ್ತಿ ಎಸೀಬೇಕು ಅನ್ಸುತ್ತಾ ? ಹಾಗಿದ್ರೆ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ.

First Published Feb 14, 2023, 4:44 PM IST | Last Updated Feb 16, 2023, 12:47 PM IST

ಮನುಷ್ಯನಾದವನಿಗೆ ಸಿಟ್ಟು ಬಂದೇ ಬರುತ್ತದೆ. ಆದರೆ ಕೆಲವೊಬ್ಬರಿಗೆ ಈ ಸಿಟ್ಟು ವಿಪರೀತವಾಗಿರುತ್ತದೆ. ಸಿಟ್ಟನ್ನು ತಡ್ಕೊಳ್ಳೋಕೆ ಆಗಲ್ಲ ಅನ್ನೋ ಪರಿಸ್ಥಿತಿ. ಹೀಗಾದಾಗ ಕೈಗೆ ಸಿಕ್ಕಿದ್ದನ್ನೆಲ್ಲಾ ಎಸೆದು, ಚೆಲ್ಲಾಪಿಲ್ಲಿ ಮಾಡಿ ಮನೆಯನ್ನೇ ರಣಾಂಗಣ ಮಾಡ್ತಾರೆ. ಸಿಟ್ಟು ಇಳಿದ ಮೇಲೆ ಅಯ್ಯೋ ಅಂತ ಬೇಜಾರು ಮಾಡಿಕೊಳ್ತಾರೆ. ಆದ್ರೆ ಇನ್ಮುಂದೆ ಸಿಟ್ಟು (Angry) ಬಂದಾಗ ಎಲ್ಲಾ ವಸ್ತು ಎಸೆದು ರಾದ್ಧಾಂತ ಮಾಡೋಕೆ ಒಂದು ಜಾಗಾನೇ ಇದೆ. ಹೌದು, ಬೆಂಗಳೂರಿನಲ್ಲೂ ಫಾರಿನ್ ರೇಜ್ ರೂಂ ಟ್ರೆಂಡ್ ಶುರುವಾಗಿದೆ.

ಬಸವನಗುಡಿಯಲ್ಲಿ ಆರಂಭವಾಗಿರೋ ಈ ಫಾರಿನ್ ರೇಜ್ ರೂಂಗೆ ಹೋದರೆ ನೀವು ಹಣ ಕೊಟ್ಟು ವಸ್ತುಗಳನ್ನು (Things) ಪುಡಿ ಪುಡಿ ಮಾಡಬಹುದು. 99 ರೂ ಯಿಂದ 3 ಸಾವಿರ ಕೊಟ್ಟು ವಸ್ತುಗಳನ್ನ ಪೀಸ್ ಪೀಸ್ ಮಾಡಬಹುದು. ಇದು ಮಾನಸಿಕವಾಗಿ ಒತ್ತಡ (Mental pressure)ದಲ್ಲಿದವರಿಗೆ ಸಹಾಯಕ ಅಂತಾರೆ ರೇಜ್ ರೂಮ್ ಪ್ರಾರಂಭಿಸಿದ ಅನನ್ಯ ಶೆಟ್ಟಿ

ಅಡಿಕೆಯಲ್ಲಿದೆ ಮುಖದ ಸುಕ್ಕು ನಿವಾರಿಸಿ, ಸೌಂದರ್ಯ ಹೆಚ್ಚಿಸುವ ಸೂಪರ್ ಸೀಕ್ರೆಟ್