ಡಾಗ್ ಶೋನಲ್ಲಿ ಎಲ್ಲರ ಗಮನ ಸೆಳೆದ ಚಾರ್ಲಿ 777 ಖ್ಯಾತಿಯ ಶ್ವಾನ
ಕಾಫಿನಾಡು ಚಿಕ್ಕಮಗಳೂರು ನಗರದ ಬಿಎಡ್ ಕ್ರೀಡಾಂಗಣದಲ್ಲಿ ಶ್ವಾನ ಪ್ರದರ್ಶನ ನಡೆಯಿತು. 29ಕ್ಕೂ ಹೆಚ್ಚು ತಳಿಯ ಶ್ವಾನಗಳು ಭಾಗಿಯಾಗಿದ್ದವು. ಚಾರ್ಲಿ 777 ಖ್ಯಾತಿಯ ಶ್ವಾನ ಕೂಡ ಭಾಗಿಯಾಗಿದ್ದು, ಎಲ್ಲರ ಗಮನ ಸೆಳೀತು.
ಶ್ವಾನಗಳಂದ್ರೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ ಹೇಳಿ, ಕೆಲವರು ಪ್ರೀತಿಗಾಗಿ ಸಾಕಿದ್ರೆ ಇನ್ನು ಕೆಲವರು ಉದ್ಯಮನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಅಪರೂಪದ ಶ್ವಾನಗಳನ್ನು ಒಂದಡೆ ನೋಡುವ ಭಾಗ್ಯವನ್ನು ಚಿಕ್ಕಮಗಳೂರಿನ ಜಿಲ್ಲಾಡಳಿತ ಮಾಡಿಕೊಟ್ಟಿತ್ತು. ಚಿಕ್ಕಮಗಳೂರು ಹಬ್ಬದ ಅಂಗವಾಗಿ ಜಿಲ್ಲಾಡಳಿತ ನಗರದಲ್ಲಿ ಶ್ವಾನ ಪ್ರದರ್ಶನವನ್ನು ಆಯೋಜನೆ ಮಾಡಿತ್ತು.ಈ ಶ್ವಾನ ಸ್ಪರ್ಧೆಯಲ್ಲಿ 29ಕ್ಕೂ ಹೆಚ್ಚು ತಳಿಯ ಶ್ವಾನಗಳು ಭಾಗಿಯಾಗಿದ್ದವು. ಚಾರ್ಲಿ 777 ಸಿನಿಮಾದ ಖ್ಯಾತಿಯ ಶ್ವಾನ ಕೂಡ ಪಾಲ್ಗೊಂಡು ಎಲ್ಲರ ಗಮನ ಸೆಳೆಯಿತು.