Asianet Suvarna News Asianet Suvarna News
breaking news image

ಮನೆ ಮಗಳಂತೆ ಸಾಕಿದ್ದ ಶ್ವಾನಕ್ಕೆ ಸೀಮಂತ ಮಾಡಿದ ದಂಪತಿ

ನಾಯಿಯನ್ನು ನಂಬಿಕೆಗೆ ಇನ್ನೊಂದು ಹೆಸರು ಎಂದೇ ಹೇಳಲಾಗುತ್ತದೆ. ಒಮ್ಮೆ ಯಾರನ್ನಾದರೂ ಹಚ್ಚಿಕೊಂಡರೆ ಸಾಕು ಅವರ ಹಿಂದೆ ಮುಂದೆ ಓಡಾಡಿ ಮುದ್ದು ಮಾಡುತ್ತದೆ. ಹಾಗೆಯೇ ಮನೆಯಲ್ಲಿ ನಾಯಿ ಸಾಕುತ್ತಾ, ಕೆಲವೊಬ್ಬರು ಅದನ್ನು ವಿಪರೀತ ಹಚ್ಚಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ದಂಪತಿ ಮನೆ ಮಗಳಂತೆ ಸಾಕಿದ್ದ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ.

ಗರ್ಭಿಣಿಯರಿಗೆ ಸೀಮಂತ ಮಾಡುವುದು ಸಾಮಾನ್ಯ ಶಾಸ್ತ್ರ. ಆದರೆ ಗದಗದಲ್ಲಿ ದಂಪತಿಗಳು ತಾವು ಮನೆ ಮಗಳಂತೆ ಸಾಕಿದ್ದ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ. ನಾಯಿಯನ್ನು ನಂಬಿಕೆಗೆ ಇನ್ನೊಂದು ಹೆಸರು ಎಂದೇ ಹೇಳಲಾಗುತ್ತದೆ. ಒಮ್ಮೆ ಯಾರನ್ನಾದರೂ ಹಚ್ಚಿಕೊಂಡರೆ ಸಾಕು ಅವರ ಹಿಂದೆ ಮುಂದೆ ಓಡಾಡಿ ಮುದ್ದು ಮಾಡುತ್ತದೆ. ಹಾಗೆಯೇ ಮನೆಯಲ್ಲಿ ನಾಯಿ ಸಾಕುತ್ತಾ, ಕೆಲವೊಬ್ಬರು ಅದನ್ನು ವಿಪರೀತ ಹಚ್ಚಿಕೊಳ್ಳುತ್ತಾರೆ. ಹಾಗೆಯೇ ಗದಗದ ದಂಪತಿ ಮನೆ ಮಗಳಂತೆ ಸಾಕಿದ್ದ ಶ್ವಾನಕ್ಕೆ ಸೀಮಂತ ಮಾಡಿದ್ದಾರೆ. ಇಲ್ಲಿನ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅಶೋಕ ಸೊರಟೂರ ದಂಪತಿ ಗರ್ಭಿಣಿ ಶ್ವಾನಕ್ಕೆ ಸೀಮಂತ ಕಾರ್ಯ ನಡೆಸಿದರು. ಮನೆ ಸದಸ್ಯೆಯಂತೆ ಸಾಕಿದ ರೂಬಿಗೆ ಅದ್ದೂರಿ ಸೀಮಂತ ಮಾಡಿದರು. ಮಹಿಳೆಯರೆಲ್ಲಾ ಸೇರಿ ಬಾನೆ ಪದ ಹಾಡಿ, ಶ್ವಾನಕ್ಕೆ ಆರತಿ ಬೆಳಗಿದರು.

Interesting News: ನಾಯಿ ಜೊತೆ ಫೆಸಿಫಿಕ್ ಸಮುದ್ರದಲ್ಲಿ ಮೂರು ತಿಂಗಳು ಕಳೆದವನ ಕಥೆ

Video Top Stories