ಜಿಲ್ಲಾ ಪಂಚಾಯತ್ ಅಧ್ಯಕ್ಷ ಈಗ ಕಂಡಕ್ಟರ್.! ಇಲ್ಲಿದೆ ವಿಡಿಯೋ

ರಾಜ್ಯದ ಸಚಿವರ ಸ್ಥಾನಮಾನ ಹೊಂದಿರುವ ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೇ ಬಸ್‌ ಕಂಡಕ್ಟರ್‌ ಆಗಿ ರೈಟ್‌ ಪೋಯಿ (ಹೋಗುವ) ಎಂದು ಉಚಿತವಾಗಿ ಜನರಿಗೆ ಸೇವೆ ಸಲ್ಲಿಸಿದ್ದಾರೆ. ಇಲ್ಲಿದೆ ವಿಡಿಯೋ

First Published May 29, 2020, 1:07 PM IST | Last Updated May 29, 2020, 1:07 PM IST

ಉಡುಪಿ(ಮೇ 29): ರಾಜ್ಯದ ಸಚಿವರ ಸ್ಥಾನಮಾನ ಹೊಂದಿರುವ ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೇ ಬಸ್‌ ಕಂಡಕ್ಟರ್‌ ಆಗಿ ರೈಟ್‌ ಪೋಯಿ (ಹೋಗುವ) ಎಂದು ಉಚಿತವಾಗಿ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಉಡುಪಿಯಲ್ಲಿ ಶಾಸಕ ರಘುಪತಿ ಭಟ್‌ ಉಸ್ತುವಾರಿಯಲ್ಲಿ ಸೋಮವಾರದಿಂದ ಉಚಿತ ಸಿಟಿ ಬಸ್‌ ಸೇವೆ ಆರಂಭವಾಗಿದೆ. ಟಿಕೆಟ್‌ ಇಲ್ಲದೆ ಉಚಿತ ಪ್ರಯಾಣವಾದ್ದರಿಂದ ಅವುಗಳಲ್ಲಿ ಕಂಡಕ್ಟರ್‌ ಇರುವುದಿಲ್ಲ. ಅವರ ಬದಲಿಗೆ ಬಿಜೆಪಿಯ ಕಾರ್ಯಕರ್ತರು ಪ್ರಯಾಣಿಕರಿಗೆ ಹತ್ತುವುದಕ್ಕೆ ಇಳಿಯುವುದಕ್ಕೆ ಸಹಾಯ ಮಾಡುತ್ತಿದ್ದಾರೆ.

ಹಾಂಕಾಂಗ್‌ ಮೇಲೆ ಚೀನಾ ಕಪಿಮುಷ್ಠಿಗೆ ಸಂಸತ್‌ ಸಮ್ಮತಿ

ಅದೇ ರೀತಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬ ಅವರು ಪಕ್ಷದ ಕಾರ್ಯಕರ್ತನ ನೆಲೆಯಲ್ಲಿ ಒಂದು ದಿನವಿಡೀ ಬಸ್ಸಲ್ಲಿ ಕಂಡಕ್ಟರ್‌ ಆಗಿ ಕೆಲಸ ಮಾಡಿದ್ದಾರೆ. ಮಾತ್ರವಲ್ಲದೆ ಬಸ್ಸು ಹತ್ತುವ ಪ್ರಯಾಣಿಕರ ಕೈಗೆ ಸ್ಯಾನಿಟೈಸರ್‌ ಹಾಕುವುದು, ಅವರ ಮಾಹಿತಿ ಸಂಗ್ರಹಿಸಿ ಬರೆದಿರುವುದು, ನಿಲ್ದಾಣ ಬಂದಾಗ ಇಳಿಸುವುದು ಇತ್ಯಾದಿಗಳನ್ನು ಮಾಡಿದ ಅವರ ಸರಳತೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸುತಿದ್ದಾರೆ.

ಅಶ್ಲೀಲ ಮೆಸೇಜ್‌ ಕಳಿಸಿದ್ದಕ್ಕೆ ಬಾಲಕನಿಗೆ ತಂಡದಿಂದ ಹಲ್ಲೆ

ದಿನಕರ ಬಾಬು ಅವರು ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯಲ್ಲಿ ವಾಚ್‌ಮೆನ್‌ ಆಗಿದ್ದರು. ನಂತರ ಜಿಪಂ ಅಧ್ಯಕ್ಷರ ಕಾರಿನ ಚಾಲಕನಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಈಗ ಅಧ್ಯಕ್ಷರಾಗಿದ್ದಾರೆ.

Video Top Stories