Asianet Suvarna News Asianet Suvarna News

ಕಾರವಾರ: ಅನಾರೋಗ್ಯಕ್ಕೆ ತುತ್ತಾದ ಮಹಿಳೆಯನ್ನ 5KM ಹೊತ್ತು ಸಾಗಿದ ಜನ..!

Jun 13, 2021, 11:40 AM IST

ಕಾರವಾರ(ಜೂ.13): ಅನಾರೋಗ್ಯಕ್ಕೆ ತುತ್ತಾದ ಮಹಿಳೆಯನ್ನ ಐದು ಕಿ.ಮೀ. ಹೊತ್ತು ಸಾಗಿದ ಘಟನೆ ತಾಲೂಕಿನ ಮಚ್ಚಳ್ಳಿ ಗ್ರಾಮದಲ್ಲಿ ನಡೆದಿದೆ. ಕುರ್ಚಿಗೆ ಕೋಲು ಕಟ್ಟಿ ವೃದ್ಧೆಯನ್ನ ಹೊತ್ತು ಸಾಗಿಸಲಾಗಿದೆ. ಈ ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲ, ಗ್ರಾಮಕ್ಕೆ ಆಂಬುಲೆನ್ಸ್‌ ಸೇರಿದಂತೆ ಯಾವುದೇ ವಾಹನಗಳು ಬರೋದಿಲ್ಲ. ಹೀಗಾಗಿ ಇಲ್ಲಿನ ಜನರು ಅನಾರೋಗ್ಯಕ್ಕೆ ತುತ್ತಾದರೆ ದೇವರೇ ಕಾಪಾಡುವಂತ ಪರಿಸ್ಥಿತಿ ಇದೆ. ಸದ್ಯ ವೃದ್ಧೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ವಿಜಯಪುರ: ಕೊರೋನಾ ನಿಯಮ ಉಲ್ಲಂಘಿಸಿ ಮದುವೆಯಲ್ಲಿ ನೂರಾರು ಜನರು ಭಾಗಿ