ಮಳೆ ನಿಂತರೂ ಮನೆಗಳು ಜಲಾವೃತ; ಮನೆಯಲ್ಲಿ ಇರಲಾಗದೇ ಗ್ರಾಮಸ್ಥರ ಪರದಾಟ

ಯಾದಗಿರಿ ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿದ್ದ ಮಳೆ ಕೊಂಚ ಬಿಡುವು ಕೊಟ್ಟಿದೆ. ಮಳೆಯೇನೋ ನಿಂತಿದೆ ಆದರೆ ಅವಾಂತರಗಳು ಮುಂದುವರೆದಿವೆ. ಯಾದಗಿರಿ ತಾಲೂಕಿನ ಮುಪ್ಪೂರು ಗ್ರಾಮದಲ್ಲಿ 15 ಕ್ಕೂ ಮನೆಗಳು ಜಲಾವೃತವಾಗಿದ್ದು ಪಾಚಿ ಕಟ್ಟಿದೆ. ಇದರಿಂದ ದುರ್ವಾಸನೆ ಬರುತ್ತಿದ್ದು ಮನೆಯಲ್ಲಿ ಕೂರಲಾಗದ ಸ್ಥಿತಿ ನಿರ್ಮಾಣವಾಗಿದೆ. ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು ಗ್ರಾಮಸ್ಥರಿಗೆ ರೋಗ ಭೀತಿ ಎದುರಾಗಿದೆ. 

First Published Aug 29, 2020, 11:28 AM IST | Last Updated Aug 29, 2020, 11:28 AM IST

ಯಾದಗಿರಿ (ಆ. 29):  ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿದ್ದ ಮಳೆ ಕೊಂಚ ಬಿಡುವು ಕೊಟ್ಟಿದೆ. ಮಳೆಯೇನೋ ನಿಂತಿದೆ ಆದರೆ ಅವಾಂತರಗಳು ಮುಂದುವರೆದಿವೆ. ಯಾದಗಿರಿ ತಾಲೂಕಿನ ಮುಪ್ಪೂರು ಗ್ರಾಮದಲ್ಲಿ 15 ಕ್ಕೂ ಮನೆಗಳು ಜಲಾವೃತವಾಗಿದ್ದು ಪಾಚಿ ಕಟ್ಟಿದೆ. ಇದರಿಂದ ದುರ್ವಾಸನೆ ಬರುತ್ತಿದ್ದು ಮನೆಯಲ್ಲಿ ಕೂರಲಾಗದ ಸ್ಥಿತಿ ನಿರ್ಮಾಣವಾಗಿದೆ. ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು ಗ್ರಾಮಸ್ಥರಿಗೆ ರೋಗ ಭೀತಿ ಎದುರಾಗಿದೆ. 

ಕೂಡಲೇ ಪಂಪ್‌ಸೆಟ್‌ನಿಂದ ನೀರು ಎತ್ತಿಸಬೇಕು. ಜೊತೆಗೆ ನೀರು ಬರದಂತೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. 

ಮಾತು ತಪ್ಪದೇ ತ್ರಿವಳಿಗೆ ಜನ್ಮ ನೀಡಿದಾಕೆ ಕುಟುಂಬಕ್ಕೆ ನಟ ಸೋನು ಸೂದ್ ನೆರವು