ಕೊರೋನಾ 3ನೇ ಅಲೆ ಆತಂಕ: ಯಾದಗಿರಿಗೆ ಮಹಾರಾಷ್ಟ್ರವೇ ಡೇಂಜರ್..!
* ಕೋವಿಡ್ ನಿಯಂತ್ರಣಕ್ಕೆ ಚೆಕ್‌ಪೋಸ್ಟ್ ಓಪನ್
* ಆತಂಕ ತಂದ ಕೊರೋನಾ 3ನೇ ಅಲೆ
* ರಿಪೋರ್ಟ್ ಇಲ್ಲದಿದ್ದರೆ ಸ್ಥಳದಲ್ಲೇ ಕೋವಿಡ್ ಟೆಸ್ಟ್
ಯಾದಗಿರಿ(ಆ.07): ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆತಂಕ ತಂದಿದೆ. ಹೌದು, ಯಾದಗಿರಿ ಜಿಲ್ಲೆಯ ನೆರೆ ರಾಜ್ಯ ಮಹಾರಾಷ್ಟ್ರವೇ ಡೇಂಜರ್ ಆಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಚೆಕ್‌ಪೋಸ್ಟ್ ತೆರೆಯಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 8 ಕಡೆ ಚೆಕ್‌ಪೋಸ್ಟ್‌ಗಳನ್ನ ನಿರ್ಮಿಸಲಾಗಿದೆ. ಯರಗೋಳ, ಮಲ್ಲಾ(ಬಿ), ಬಂಡೋಳ್ಳಿ, ಮುಡಬೂಳ, ಕುಂಟಿಮರಿ, ನಾರಾಯಣಪುರ ಹಾಗೂ ಮಾಳನೂರಿನಲ್ಲಿ ಚೆಕ್‌ಪೋಸ್ಟ್‌ಗಳನ್ನ ಓಪನ್ ಮಾಡಲಾಗಿದೆ. ರಿಪೋರ್ಟ್ ಇಲ್ಲದಿದ್ದರೆ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ.
ಖಾತೆ ಹಂಚಿಕೆ ಬಹುತೇಕ ಫೈನಲ್, ಇಂದು ಅಧಿಕೃತ ಪಟ್ಟಿ ರಿಲೀಸ್: ಸಂಭಾವ್ಯ ಖಾತೆಗಳು ಹೀಗಿವೆ