ಖಾತೆ ಹಂಚಿಕೆ ಬಹುತೇಕ ಫೈನಲ್, ಇಂದು ಅಧಿಕೃತ ಪಟ್ಟಿ ರಿಲೀಸ್: ಸಂಭಾವ್ಯ ಖಾತೆಗಳು ಹೀಗಿವೆ
ಸಿಎಂ ಬೊಮ್ಮಾಯಿ ಅವರ ನೂತನ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆ ಬಹುತೇಕ ಮುಗಿದಿದ್ದು, ಪಟ್ಟಿಯನ್ನು ವರಿಷ್ಠರ ಪರಿಶೀಲನೆಗೆ ಕಳುಹಿಸಲಾಗಿದೆ. ಇಂದು ಎಲ್ಲವೂ ಅಂತಿಮವಾಗುವ ನಿರೀಕ್ಷೆ ಇದೆ.
ಬೆಂಗಳೂರು (ಆ. 07): ಸಿಎಂ ಬೊಮ್ಮಾಯಿ ಅವರ ನೂತನ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆ ಬಹುತೇಕ ಮುಗಿದಿದ್ದು, ಪಟ್ಟಿಯನ್ನು ವರಿಷ್ಠರ ಪರಿಶೀಲನೆಗೆ ಕಳುಹಿಸಲಾಗಿದೆ. ಇಂದು ಎಲ್ಲವೂ ಅಂತಿಮವಾಗುವ ನಿರೀಕ್ಷೆ ಇದೆ.
ಬಿಎಸ್‌ವೈ ಸರ್ಕಾರದಲ್ಲಿದ್ದವರಿಗೆ ಬಹುತೇಕ ಅದೇ ಖಾತೆಗಳನ್ನು ನೀಡಲಾಗಿದೆ. ಅಶೋಕ್‌ಗೆ ಕಂದಾಯ, ಸೋಮಣ್ಣಗೆ ವಸತಿ, ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ, ನಿರಾಣಿಗೆ ಕೈಗಾರಿಕೆ, ಕಾರಜೋಳಗೆ ನೀರಾವರಿ ಖಾತೆ ನೀಡಲಾಗಿದೆ ಎನ್ನಲಾಗಿದೆ.