ಹೈಕೋರ್ಟ್‌ಗೆ ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಏನಿದೆ ? ಜೈಲು ಸೇರಿದ್ದರೂ ಜಾಮೀನಿಗೆ ಅರ್ಜಿ ಸಲ್ಲಿಸದ ನಟ!

ನಟ ದರ್ಶನ್ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದು,ಒಂದೆಡೆ ಊಟ ಸೇರುತ್ತಿಲ್ಲ, ಜೈಲು ವಾಸ ಸಹಿಸೋಕೆ ಆಗ್ತಿಲ್ಲ ಎಂದು ಉಲ್ಲೇಖ ಮಾಡಲಾಗಿದೆಯಂತೆ. 

First Published Jul 10, 2024, 5:51 PM IST | Last Updated Jul 10, 2024, 5:51 PM IST

ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಸೇರಿ ಕಂಗಾಲಾದ ನಟ ದರ್ಶನ್‌ಗೆ (Darshan) ಐಷಾರಾಮಿ ಜೀವನದಿಂದ ಜೈಲು ಜೀವನಕ್ಕೆ ಒಗ್ಗಿಕೊಳ್ಳಲು ಆಗ್ತಿಲ್ಲವಂತೆ. ಜೈಲೂಟ ಸೇರುತ್ತಿಲ್ಲ ಎಂದು ದರ್ಶನ್‌ ಕೋರ್ಟ್(High court) ಮೊರೆ ಹೋಗಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ನಟ ದರ್ಶನ್ ಸಲ್ಲಿಸಿರುವ ಅರ್ಜಿ ಲಭ್ಯವಾಗಿದೆ. ಒಂದೆಡೆ ಊಟ ಸೇರುತ್ತಿಲ್ಲ, ಜೈಲು ವಾಸ ಸಹಿಸೋಕೆ ಆಗ್ತಿಲ್ಲ. ಅಲ್ಲದೇ ಒಂದೆಡೆ ಜಾಮೀನು ಸಲ್ಲಿಸೋಕೆ ದರ್ಶನ್ ಪರ ವಕೀಲರಿಗೆ ಕಾರಣ ಸಿಗ್ತಿಲ್ಲ. ಮುಂದೆ ಜಾಮೀನು ಅರ್ಜಿ ಸಲ್ಲಿಸುವುದಾಗಿ ರಿಟ್ ಅರ್ಜಿಯಲ್ಲಿ(Writ petition) ಉಲ್ಲೇಖ ಮಾಡಲಾಗಿದೆ. ಜಾಮೀನು ಅರ್ಜಿ ಸಲ್ಲಿಕೆ‌ಗೆ ಅಗತ್ಯ ದಾಖಲೆಗಳಿಗಾಗಿ ವಕೀಲರು ಕಾಯುತ್ತಿದ್ದಾರೆ. ಜೈಲು ಸೇರಿ 20 ದಿನ ಕಳೆದರೂ ಜಾಮೀನು ಅರ್ಜಿ ಬಗ್ಗೆ ಯೋಚಿಸ್ತಿಲ್ಲ ದರ್ಶನ್, ಈಗಲೇ ಜಾಮೀನು ಅರ್ಜಿ ಸಲ್ಲಿಸಿದರೆ ಪ್ರಯೋಜ‌ ಇಲ್ಲ ಅನ್ನೋ ಲೆಕ್ಕಾಚಾರದಲ್ಲಿ ಇದ್ದಂತೆ ಕಾಣುತ್ತಿದೆ. ಜೈಲಿನಲ್ಲೇ ಇದ್ದುಕೊಂಡು ಒಳ್ಳೆಯ ಊಟ, ಸೌಲಭ್ಯಕ್ಕೆ ಬೇಡಿಕೆ ಇಟ್ಟಿದ್ದು, ದರ್ಶನ್ ಬೇಡಿಕೆಗೆ ಜೈಲು ಅಧಿಕಾರಿಗಳು ಸೊಪ್ಪು ಹಾಕದ ಹಿನ್ನಲೆ ಹೈಕೋರ್ಟ್‌ಗೆ  ನಟ  ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆಯೇ ವಿಚಾರಣೆ ನಡೆಸುವಂತೆ ದರ್ಶನ್ ಪರ ವಕೀಲರ ಮನವಿ ಮಾಡಿದ್ದು, ದರ್ಶನ್ ಪರ ವಕೀಲರ ಮನವಿಗೆ ಪುರಸ್ಕಾರ ಸಿಕ್ಕಿಲ್ಲ. ನಾಳೆ ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ.

ಇದನ್ನೂ ವೀಕ್ಷಿಸಿ:  ವೀರ ಸೈನಿಕರ ಬಲಿ ಪಡೆದ ರಾಕ್ಷಸ ಉಗ್ರಪಡೆ! ಜಮ್ಮು ಕಾಶ್ಮೀರ ಮತ್ತೆ ಟಾರ್ಗೆಟ್ ಆಗೋಕೆ ಕಾರಣವೇನು..?

Video Top Stories