ವೀರ ಸೈನಿಕರ ಬಲಿ ಪಡೆದ ರಾಕ್ಷಸ ಉಗ್ರಪಡೆ! ಜಮ್ಮು ಕಾಶ್ಮೀರ ಮತ್ತೆ ಟಾರ್ಗೆಟ್ ಆಗೋಕೆ ಕಾರಣವೇನು..?

32 ದಿನಗಳಲ್ಲಿ 7..  78 ಗಂಟೆಗಳಲ್ಲಿ 4 ಉಗ್ರ ದಾಳಿ..!
ಘಟಸರ್ಪಗಳ ನಾಶಕ್ಕೆ ತಯಾರಾಗಿದೆ ನಿಗೂಢ ವ್ಯೂಹ..!
ಶತ್ರುಪಾಳಯದ ಸರ್ವನಾಶಕ್ಕೆ ಆಪರೇಷನ್ ಸರ್ವಶಕ್ತಿ..!
 

First Published Jul 10, 2024, 5:26 PM IST | Last Updated Jul 10, 2024, 5:27 PM IST

ದಿಢೀರನೇ ಹೆಡೆ ಬಿಚ್ಚಿವೆ ಕಣಿವೆನಾಡಲ್ಲಿ ಉಗ್ರಸರ್ಪಗಳು. 32 ದಿನಗಳಲ್ಲಿ ಬರೋಬ್ಬರಿ 7 ಟೆರರ್ ಅಟ್ಯಾಕ್(Terror Attack). 78 ಗಂಟೆಗಳಲ್ಲಿ 3 ದಾಳಿ. ಈ  ಘಟಸರ್ಪಗಳ ನಾಶಕ್ಕೆ ತಯಾರಾಗ್ತಾ ಇದೆ ಭಾರತದ ಆಪರೇಷನ್ ಸರ್ವಶಕ್ತಿ. ಇಷ್ಟೂ ಕಾಲ ನೆಮ್ಮದಿಯಾಗಿದ್ದ ಕಣಿವೆ ರಾಜ್ಯ, ಭೂಲೋಕಸ್ವರ್ಗ ಜಮ್ಮು ಮತ್ತು ಕಾಶ್ಮೀರದಲ್ಲಿ(Jammu Kashmir) ಮತ್ತೆ ಉಗ್ರರು (Terrorists)ಬಾಲ ಬಿಚ್ತಾ ಇದಾರೆ. ಭಾರತ ಸೇನೆಯ(Indian Army) ಮೇಲೆ ದಾಳಿ ಮಾಡ್ತಾ ಇದಾರೆ. ಕಳೆದ ಮೂರು ತಿಂಗಳಲ್ಲಿ ಈಗ 8ನೇ ಬಾರಿ ಭಾರತದ ಮೇಲೆ ದಾಳಿ ನಡೆಸಿದ್ದಾರೆ. ಉಗ್ರಸರ್ಪಗಳ ಉಪಟಳಕ್ಕೆ ಕೆರಳಿ ನಿಂತಿದೆ ಭಾರತ. ಜುಲೈ 8ನೇ ತಾರೀಖು ಕಣಿವೆ ನಾಡಲ್ಲಿ ನಡೆಯಬಾರದ ದುರಂತ ಒಂದು ನಡೆದುಹೋಗಿದೆ. ಜಮ್ಮು ಕಾಶ್ಮೀರದ ಕಥುವಾ ಅನ್ನೋ ಜಿಲ್ಲೆಯಲ್ಲಿ ಸೋಮವಾರ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ್ರು. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು  ಯೋಧರು ಹುತಾತ್ಮರಾದ್ರು. ಇನ್ನು ಐವರು ಗಾಯಗೊಂಡಿದ್ದಾರೆ. ಭಾರತದ ವಿರುದ್ಧ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರವಾದ ತಲೆ ಎತ್ತಿರೋದು ಸ್ಪಷ್ಟವಾಗಿ ಗೋಚರವಾಗ್ತಾ ಇದೆ. ಸುಮಾರು 8 ವರ್ಷಗಳ ಹಿಂದೆ, ಅದೇ ದಿನ, ಅಂದ್ರೆ 2016ರ ಜುಲೈ 8ರಂದು ದಕ್ಷಿಣ ಕಾಶ್ಮೀರದಲ್ಲಿ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದೀನ್ ‘ಕಮಾಂಡರ್’ ಬುರ್ಹಾನ್ ವಾನಿಯ ಪ್ರಾಣ ತೆಗೆದಿತ್ತು ಭಾರತದ ಸೇನೆ.

ಇದನ್ನೂ ವೀಕ್ಷಿಸಿ:  ರಾಮನಗರ ರಣರಂಗದಲ್ಲಿ ದಳಪತಿಗೆ ಡಿಕೆ ಚೆಕ್‌ಮೇಟ್..! ಬೆಂಗಳೂರು ದಕ್ಷಿಣ ಆಗಲಿದೆಯಾ ರಾಮನಗರ ?

Video Top Stories