Asianet Suvarna News Asianet Suvarna News

ದೇವಾಲಯದಲ್ಲಿ ನಿಗೂಢ ಶಬ್ಧ, ಮುನಿಸಿಕೊಂಡಳಾ ತಾಯಿ ಪಟ್ಟಲದಮ್ಮ..?

ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಪಟ್ಟಲದಮ್ಮ ದೇವಸ್ಥಾನದಲ್ಲಿ  ಕಳೆದ 8-10 ದಿನಗಳಿಂದ ವಿಚಿತ್ರ ಶಬ್ದ ಕೇಳಿ ಬರುತ್ತಿದ್ದು, ಜನರು ಆತಂಕಗೊಂಡಿದ್ದಾರೆ. 

First Published Jan 22, 2021, 3:19 PM IST | Last Updated Jan 22, 2021, 3:21 PM IST

ಮಂಡ್ಯ (ಜ. 22): ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಪಟ್ಟಲದಮ್ಮ ದೇವಸ್ಥಾನದಲ್ಲಿ  ಕಳೆದ 8-10 ದಿನಗಳಿಂದ ವಿಚಿತ್ರ ಶಬ್ದ ಕೇಳಿ ಬರುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಗೋಪುರದ ಮೇಲೆ ಹತ್ತಿ ಶಬ್ಧದ ಮೂಲ ಪತ್ತೆ ಹಚ್ಚಲು ಗ್ರಾಮಸ್ಥರಿಂದ ಪ್ರಯತ್ನಿಸಿದ್ದಾರೆ. ಆದರೆ ಎಲ್ಲಿಂದ ಶಬ್ಧ ಬರುತ್ತಿದೆ ಎಂದು ಪತ್ತೆಹಚ್ಚಲಾಗಲಿಲ್ಲ. 

'ಶಿವಮೊಗ್ಗ ಹುಣಸೋಡು ಸ್ಫೋಟ, ಪುಲ್ವಾಮಾ ಸ್ಫೋಟಕ್ಕಿಂತ ದೊಡ್ಡದು'

ಕಳೆದ 11ವರ್ಷಗಳಿಂದ ಹಬ್ಬ ನಿಲ್ಲಿಸಲಾಗಿದೆ. ಹಾಗಾಗಿ ದೇವಿ ಮುನಿಸಿಕೊಂಡಿದ್ದಾಳೆಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಜಾಗದ ವಿವಾದದಿಂದ ದೇವಾಲಯ ಕಾಮಗಾರಿ ನಡೆಯದೆ ಹಬ್ಬ ನಿಂತಿದೆ. ಹಾಗಾಗಿಯೇ ದೇವಿ ಹೀಗೇ ವಿಚಿತ್ರ ಶಬ್ಧ ಮಾಡುತ್ತ ಸೂಚನೆ ಕೊಡ್ತಿದ್ದಾಳೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ನಿಖರವಾದ ಕಾರಣ ಮಾತ್ರ ತಿಳಿದು ಬಂದಿಲ್ಲ. 

Video Top Stories