Asianet Suvarna News Asianet Suvarna News

BDA ಅಕ್ರಮ ಸಕ್ರಮ ವಿಚಾರ: ಮಾಧುಸ್ವಾಮಿ, ಸೋಮಣ್ಣ ಮಧ್ಯೆ ವಾಕ್ಸಮರ

ಜೆ.ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಟಾಕ್‌ ವಾರ್‌| 12 ವರ್ಷಗಳ ದಾಖಲೆ ನೀಡುವ ಸಂಬಂಧ ವಾಕ್ಸಮರ| 12 ವರ್ಷಗಳ ದಾಖಲೆಗಳನ್ನ ಹೇಗೆ ನೀಡೋದು ಎಂದ ಪ್ರಶ್ನಿಸಿದ ಡಿಸಿಎಂ ಅಶ್ವತ್‌ ನಾರಾಯಣ್‌| ಮಾಧುಸ್ವಾಮಿ ಮಾತನಾಡುವಾಗ ಮಧ್ಯಪ್ರವೇಶಿಸಿದ ಸಚಿವ ವಿ. ಸೋಮಣ್ಣ| 

First Published May 15, 2020, 2:50 PM IST | Last Updated May 15, 2020, 2:50 PM IST

ಬೆಂಗಳೂರು(ಮೇ.15): ಬಿಡಿಎ ಅಕ್ರಮ ಸಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ(ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಜೆ.ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಅವರ ಮಧ್ಯ ವಾಕ್ಸಮರ ನಡೆದಿತ್ತು. ಆದರೆ, ಇಂದೂ ಕೂಡ ಇವರಿಬ್ಬರ ಮಧ್ಯೆದ ಟಾಕ್‌ ಫೈಟ್‌ ಮುಂದುವರೆದಿದೆ. 12 ವರ್ಷಗಳ ದಾಖಲೆ ನೀಡುವ ಸಂಬಂಧ ಮಾತಿಗೆ ಮಾತು ಬೆಳೆದಿದೆ.

ಇಡೀ ಜಗತ್ತಿಗೆ ಕೊರೋನಾ ಚಿಂತೆಯಾದ್ರೆ, ಇವರಿಗೆ ಟಿಕ್‌ಟಾಕ್‌ ವಿಡಿಯೋ ಮಾಡೋ ಚಿಂತೆ..!

12 ವರ್ಷಗಳ ದಾಖಲೆಗಳನ್ನ ಹೇಗೆ ನೀಡೋದು ಎಂದು ಉಪಮುಖ್ಯಮಂತ್ರಿ ಅಶ್ವತ್‌ ನಾರಾಯಣ್‌ ಅವರು ಪ್ರಶ್ನೆ ಮಾಡಿದ್ದಾರೆ. ನಾಲ್ಕೈದು ದಾಖಲೆಗಳಲ್ಲಿ ಒಂದಾದ್ರೂ ನೀಡಿ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಈ ನಡುವೆ ಮಾಧುಸ್ವಾಮಿ ಮಾತನಾಡುವಾಗ ಸಚಿವ ವಿ. ಸೋಮಣ್ಣ ಮಧ್ಯಪ್ರವೇಶಿಸಿದಾಗ ಮಾತಿಗೆ ಮಾತು ಬೆಳೆದಿದೆ.
 

Video Top Stories