ಇಡೀ ಜಗತ್ತಿಗೆ ಕೊರೋನಾ ಚಿಂತೆಯಾದ್ರೆ, ಇವರಿಗೆ ಟಿಕ್‌ಟಾಕ್ ವಿಡಿಯೋ ಮಾಡೋ ಚಿಂತೆ..!
ಕ್ವಾರಂಟೈನ್ ಉದ್ದೇಶವೇ ಮರೆತ ಜನ| ಕೊರೋನಾ ಹೊಡೆದೋಡಿಸೋ ಬದ್ಲು ಮೈಮೇಲೆ ಎಳೆದುಕೊಳ್ತಿರೋ ಮಂದಿ| ಕ್ವಾರಂಟೈನ್ ಕೇಂದ್ರದಲ್ಲಿದ್ದ ಸಾಮಾಜಿಕ ಅಂತರವನ್ನೇ ಮರೆತ ಜನ| ಇದೇ ಹಾಸ್ಟೆಲ್‌ನಲ್ಲಿದ್ದ 9 ಮಂದಿಗೆ ಕೊರೋನಾ ಸೋಂಕು ತಗುಲಿದೆ|
ಹಾಸನ(ಮೇ.15): ಕ್ವಾರಂಟೈನ್‌ನಲ್ಲಿದ್ದವರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಕ ಕೊರೋನಾ ವೈರಸ್‌ನಿಂದ ಪಾರಾಗಬೇಕು. ಆದರೆ, ಕೆಲವರು ಕ್ವಾರಂಟೈನ್ ಕೇಂದ್ರದಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಲ್ಲರ ಜೊತೆ ಆಟವಾಡುತ್ತಾ, ಟಿಕ್‌ಟಾಕ್ ವಿಡಿಯೋ ಮಾಡುತ್ತಾ ಕಾಲ ಕಳೆಯುತ್ತಿರುವ ಘಟನೆ ನಗರದಲ್ಲಿ ನಡೆದಿದೆ.
ಮಾರಕ ಕೊರೋನಾ ವಿರುದ್ಧ ಹೋರಾಡಿ ಗೆದ್ದ 10ರ ಪೋರ: ಸೋಂಕು ಪೀಡಿತ ಮಕ್ಕಳಿಗೆ ಈತನೇ ಸ್ಪೂರ್ತಿ..!
ಕ್ವಾರಂಟೈನ್ ಕೇಂದ್ರದಲ್ಲಿದ್ದ ಕೆಲವರು ಸಾಮಾಜಿಕ ಅಂತರವನ್ನೇ ಮರೆತು ಬಿಟ್ಟಿದ್ದಾರೆ. ಜೊತೆಗೆ ಅಲ್ಲಿದ್ದ ಎಲ್ಲರ ಜೊತೆಗೆ ಬೆರತು ಗುಂಪು ಗುಂಪಾಗಿ ಆಟ, ಓಡಾಟ, ಕುಣಿಯುತ್ತಾ ಟಿಕ್‌ಟಾಕ್ ವಿಡಿಯೋ ಮಾಡುತ್ತಿದ್ದಾರೆ. ಇವರನ್ನ ಕ್ವಾರಂಟೈನ್‌ನಲ್ಲಿಟ್ಟ ಉದ್ದೇಶವನ್ನೇ ಮರೆತ್ತಿದ್ದಾರೆ. ಇದೇ ಹಾಸ್ಟೆಲ್‌ನಲ್ಲಿದ್ದ 9 ಮಂದಿಗೆ ಕೊರೋನಾ ಸೋಂಕು ತಗುಲಿದೆ.