Asianet Suvarna News Asianet Suvarna News

ಸಿಎಂ ಸ್ವಕ್ಷೇತ್ರದಲ್ಲಿ ನೋಡಲಾರದ ಅನಾಚಾರ: ಸರ್ಕಾರಿ ನೌಕರರಿಂದ ಅರೆಬೆತ್ತಲೆ ಡ್ಯಾನ್ಸ್‌..!

ಕರ್ತವ್ಯದ ವೇಳೆ ಸರ್ಕಾರಿ ನೌಕರರು ಮದ್ಯಪಾನ| ಸಾರ್ವಜನಿಕ ಸ್ಥಳದಲ್ಲಿ ಅರೆಬೆತ್ತಲೆ ನೃತ್ಯ| ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಬಳಿ ನಡೆದ ಘಟನೆ| ಕಂಠಪೂರ್ತಿ ಕುಡಿದು ಬೈಕ್‌ ಸ್ಟಂಟ್‌ ಮಾಡಿದ ಮೆಸ್ಕಾಂ ನೌಕರರು| 

ಶಿವಮೊಗ್ಗ(ನ.08): ಕರ್ತವ್ಯದ ವೇಳೆ ಸರ್ಕಾರಿ ನೌಕರರು ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅರೆಬೆತ್ತಲೆಯಾಗಿ ನಗ್ನತೆ ಪ್ರದರ್ಶನ ಮಾಡಿದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಬಳಿ ನಡೆದಿದೆ. ಕುಡಿದ ಅಮಲಿನಲ್ಲಿ ಮೆಸ್ಕಾಂ ನೌಕರರು ಕುಣಿದು ಕುಪ್ಪಳಿಸಿದ್ದಾರೆ.

ಬಿಜೆಪಿ ಮುಖಂಡ ಹತ್ಯೆ: ಸಿಬಿಐ ತನಿಖೆಯಲ್ಲೂ ಸಾಬೀತಾಯ್ತು ಸುವರ್ಣ ನ್ಯೂಸ್ ಕೊಟ್ಟ ಸಾಕ್ಷ್ಯಿಗಳು

ಚಂದ್ರಶೇಖರ್‌ ರಾಥೋಡ್‌, ವಿನಯ್‌ ಕುಮಾರ್‌, ರವಿ, ಸುರೇಶ, ಮಂಜುನಾಥ್‌, ಮಹೇಶ್ವರಪ್ಪ ಎಂಬುವರು ಕಂಠಪೂರ್ತಿ ಕುಡಿದು ಬೈಕ್‌ ಸ್ಟಂಟ್‌ ಮಾಡಿದ್ದಲ್ಲದೆ ಸಾರ್ವಜನಿಕರ ಸ್ಥಳದಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ. 
 

Video Top Stories