ಕರ್ಫ್ಯೂ ಜಾರಿ: ಗುಮ್ಮಟನಗರಿ ವಿಜಯಪುರ ಸಂಪೂರ್ಣ ಸ್ತಬ್ಧ

ವಿಜಯಪುರ ನಗರದ ಎಲ್ಲ ಪ್ರಮುಖ ರಸ್ತೆಗಳು ಖಾಲಿ ಖಾಲಿ| ಹೊರಗಡೆ ಸುಳಿದಾಡದ ಜನರು| ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆ|  ನಗರದ ಎಲ್ಲ ಅಂಗಡಿ ಮುಂಗಟ್ಟುಗಳನ್ನ ಬಂದ್‌|

First Published May 24, 2020, 1:05 PM IST | Last Updated May 24, 2020, 1:05 PM IST

ವಿಜಯಪುರ(ಮೇ.24): ನಗರದಲ್ಲಿ ಬೆಳಿಗ್ಗೆಯಿಂದ ಸಂಪೂರ್ಣವಾಗಿ ಲಾಕ್‌ಡೌನ್‌ ಜಾರಿಯಲ್ಲಿದೆ. ನಗರದ ಎಲ್ಲ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿವೆ. ಲಾಕ್‌ಡೌನ್ ಇರುವುದರಿಂದ ಜನರು ಹೊರಗಡೆ ಸುಳಿದಾಡುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರದ ಕೇಂದ್ರ ಬಸ್‌ ಬಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. 

ಕರ್ಫ್ಯೂ ಜಾರಿ: ಮನೆಯಿಂದ ಹೊರ ಬರದ ಜನ, ರಾಯಚೂರು ಕಂಪ್ಲೀಟ್‌ ಲಾಕ್‌..!

ನಗರದ ಎಲ್ಲ ಅಂಗಡಿ ಮುಂಗಟ್ಟುಗಳನ್ನ ಬಂದ್‌ ಮಾಡಲಾಗಿದೆ. ಸೋಮವಾರ ರಂಜಾನ್‌ ಹಬ್ಬ ಇರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯಿಂದಲೂ ಗೊಂದಲ ಆಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಲಾಕ್‌ಡೌನ್‌ಗೆ ಜನರೂ ಕೂಡ ಉತ್ತರ ರೀತಿಯಿಂದಲೇ ಸ್ಪಂದಿಸುತ್ತಿದ್ದಾರೆ.  
 

Video Top Stories