Asianet Suvarna News Asianet Suvarna News

ಕರ್ಫ್ಯೂ ಜಾರಿ: ಮನೆಯಿಂದ ಹೊರ ಬರದ ಜನ, ರಾಯಚೂರು ಕಂಪ್ಲೀಟ್‌ ಲಾಕ್‌..!

ರಾಯಚೂರಿನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಪಾಲನೆ|ಜನರ ಅನವಶ್ಯಕ ಓಡಾಟಕ್ಕೆ ಸಂಪೂರ್ಣ ನಿಷೇಧ|ನಗರದಲ್ಲಿರುವ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್‌|ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಬಿಗಿ ಪೊಲೀಸ್‌ ಬಂದೋಬಸ್ತ್‌|

First Published May 24, 2020, 12:10 PM IST | Last Updated May 24, 2020, 12:10 PM IST

ರಾಯಚೂರು(ಮೇ.24): ಇಂದು(ಭಾನುವಾರ) ಬೆಳಿಗ್ಗೆಯಿಂದಲೇ ನಗರದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಪಾಲನೆಯಾಗುತ್ತಿದೆ. ಜನರ ಅನವಶ್ಯಕ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಹೀಗಾಗಿ ಜನರೂ ಕೂಡ ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ನಗರದಲ್ಲಿರುವ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್‌ ಆಗಿವೆ.

ಲಾಕ್‌ಡೌನ್‌: ಮಂಡ್ಯದಲ್ಲಿ ಅಧಿಕಾರಿಗಳಿಂದಲೇ ಕರ್ಫ್ಯೂ ಉಲ್ಲಂಘಣೆ

ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನ ಹಾಕಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳಿಗೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಲಾಗಿದೆ. ಹಾಲು, ತರಕಾರಿ, ಮೆಡಿಕಲ್‌ ಶಾಪ್‌ಗಳು ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ.