Asianet Suvarna News Asianet Suvarna News

ಎಲ್ಲಾ ಆಯಾಮದಲ್ಲಿ ತನಿಖೆ ನಡೆಯುತ್ತಿದ್ದು,ಒಂದೊಂದು ಕೆಲಸಕ್ಕೆ ಇನ್‌ಸ್​ಪೆಕ್ಟರ್​ ನೇಮಿಸಿದ್ದೇವೆ: ದಯಾನಂದ್‌

ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಆಯುಕ್ತ ದಯಾನಂದ್‌ ಮಾತನಾಡಿದ್ದು, ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ದರ್ಶನ್​ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಪೊಲೀಸ್‌ ಆಯುಕ್ತ ದಯಾನಂದ್‌(Police Commissioner Dayanand) ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು 17 ಮಂದಿಯನ್ನ ಬಂಧಿಸಿದ್ದೇವೆ, ತನಿಖೆ ನಡೆಯುತ್ತಿದೆ. ಪ್ರಕರಣ ಸೂಕ್ಷ್ಮತೆ ಅರಿತು ಎಸಿಪಿಗೆ ತನಿಖೆಗೆ ವಹಿಸಲಾಗಿದೆ. ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಒಂದೊಂದು ಕೆಲಸಕ್ಕೆ ಇನ್‌ಸ್​ಪೆಕ್ಟರ್​ ನೇಮಿಸಿದ್ದೇವೆ.ಇನ್‌ಸ್​ಪೆಕ್ಟರ್​ ಗಿರೀಶ್​ ನಾಯ್ಕ್‌​ರನ್ನು ಕೂಡ ಮುಂದುವರೆಸಲಾಗಿದೆ. ಪರಿಣಿತರ ತಜ್ಞರ ಅಭಿಪ್ರಾಯ ಪಡೆದು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತ ದಯಾನಂದ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಸಕ್ಸಸ್ ತಲೆಗೆ ಏರಿದ್ರೆ ಏನಾಗುತ್ತೆ ಅನ್ನೋದಕ್ಕೆ ನಟ ದರ್ಶನ್ ದೊಡ್ಡ ಉದಾಹರಣೆ: ಭಾಮಾ ಹರೀಶ್

Video Top Stories